*ಸಂಗೀತ, ಬಟ್ಟೆ, ತಿನಿಸುಗಳಲ್ಲಿ ನಿಮ್ಮ ಅಭಿರುಚಿ ಒಂದೇ ಇದೆ ಎಂದ ಮಾತ್ರಕ್ಕೆ ಎಲ್ಲಾ ಕೂಡ ಒಂದೇ ಆಗಿರುತ್ತದೆ ಎಂಬ ಭ್ರಮೆ ಬೇಡ. ಅಭಿರುಚಿಯೇ ಸಂಬಂಧಗಳ ಮಾನದಂಡವಲ್ಲ. ನಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಜೀವನ ಸಂಗಾತಿಯಿಂದ ಮಾತ್ರ ಕೊನೆಯ ತನಕ ಖುಷಿ ಖುಷಿಯಲ್ಲಿ ಜೀವನ ನಡೆಸಬಹುದು.
* ಮುನಿಸಿಕೊಂಡು ದೂರ ಉಳಿಯುವುದಕ್ಕಿಂತ ಪರಸ್ಪರ ವಾದ ಮಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎನ್ನುತ್ತದೆ ಒಂದು ಸಂಶೋಧನೆ. ಸುಮ್ಮನೆ ಅನುಮಾನ ಬಗೆಹರಿಸಿಕೊಳ್ಳದೇ ದಿನಾ ಜಗಳ ಮಾಡುವುದಕ್ಕಿಂತ, ಕೊರಗುವುದಕ್ಕಿಂತ ಪರಸ್ಪರ ವಾದ ಮಾಡಿ,.ಒಬ್ಬರ ಮನಸ್ಸನ್ನು ಇನ್ನೊಬ್ಬರು ಗೆಲ್ಲಿ.
* ಲವ್ ಮ್ಯಾರೇಜ್ ಓಕೆ…ಅದಕ್ಕಿಂತ ಅರೆಂಜ್ ಮ್ಯಾರೇಜ್ ಕಡೆಯೇ ಹೆಚ್ಚು ಗಮನ ಕೊಡಿ..ಕೆಲವೊಮ್ಮೆ ನೀವು ಅಂದುಕೊಂಡಿರುವ ಪ್ರೀತಿ ಕೇವಲ ಆಕರ್ಷಣೆಯೂ ಆಗಿರಬಹುದು. ಆದ್ದರಿಂದ ಅರೆಂಜ್ ಮ್ಯಾರೇಜ್ ಕಡೆ ಗಮನಕೊಡಿ. ನಿಮ್ಮ ಕುಟುಂಬವೂ ನಿಮ್ಮ ಬೆಂಬಲಕ್ಕೆ ಇರುತ್ತದೆ.
*ಪರಸ್ಪರ ಒಬ್ಬರನೊಬ್ಬರು ಗೌರವಿಸಿ.. ಅಹಂ ಇಬ್ಬರ ಹತ್ತಿರವೂ ಸೋಕುವುದು ಬೇಡ. ಒಬ್ಬರಾದರೂ ಸೋಲಿ,… ನಮ್ಮವರ ಎದುರು ನಾವು ಸೋತರೆ ನಷ್ಟವೇನೂ ಇಲ್ಲ.. ಗೆಲ್ಲುವುದು ಪ್ರೀತಿ, ಉಳಿಯುವುದು ಸಂಬಂಧ.
* ಎಲ್ಲಾಕ್ಕಿಂತ ಮುಖ್ಯವಾಗಿ ಸಂಬಂಧಗಳನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಸಂಬಂಧಗಳ ಮೌಲ್ಯ ತಿಳಿಯಿರಿ. ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳಿ. ಅನುಮಾನದ ಹುತ್ತ ಕಟ್ಟದಂತೆ ಜೋಪಾನವಾಗಿರಿ. ಒಬ್ಬರ ಮೇಲೆ ಇನ್ನೊಬ್ಬರಿಗೆ ಗೌರವಿರಲಿ.