ಕಮ್ಯುನಿಕೇಶನ್ ಸ್ಕಿಲ್ ತುಂಬಾ ಮುಖ್ಯ. ಈ ಕಾಂಪಿಟೇಟಿವ್ ವರ್ಲ್ಡ್ ನಲ್ಲಿ ಎಷ್ಟೇ ಬುದ್ಧಿವಂತರಾಗಿದ್ರೂ ಕಮ್ಯುನಿಕೇಷನ್ ಸ್ಕಿಲ್ ಇಲ್ದೆ ಇದ್ರೆ ನೋ ಯೂಸ್.
ಕಮ್ಯುನಿಕೇಶನ್ ಸ್ಕಿಲ್ ಹೆಚ್ಬೇಕು ಅಂದ್ರೆ ಈ ಕೆಳಗಿನ ಸೂತ್ರಗಳನ್ನು ಫಾಲೋ ಮಾಡಿ
* ನಿಮ್ಮದೇ ಅಭಿಪ್ರಾಯ ಹೊಂದಿರೋ ಜೊತೆ ಬೆರೀರಿ. ಇಬ್ರು ಒಬ್ಬರೊಬ್ಬರಿಗಕ್ಲೋಸ್ ಆದಾಗ ಉತ್ತಮ ಕೌಶಲ್ಯ ಬೆಳೆಸಿಕೊಳ್ಬಹುದು.
* ಸುಮ್ನೆ ಬಾಯಿಗೆ ಬಂದಹಾಗೆ ಮಾತಾಡೋಕೆ ಹೋಗ್ಬೇಡಿ. ಯಾವ್ದೇ ವಿಚಾರದ ಬಗ್ಗೆ ಮಾತಾಡುವಾಗ ಆ ವಿಷ್ಯದ ಬಗ್ಗೆ ತಿಳಿಸಿಕೊಂಡು ಮಾತಾಡಿ. ಆಗ ಕಮ್ಯುನಿಕೇಷನ್ ಸ್ಕಿಲ್ ಡೆವಲಪ್ ಆಗುತ್ತೆ.
* ಕೇಳಿಸಿಕೊಳ್ಳೋದನ್ನು ಕಲೀರಿ : ನೀವು ಉತ್ತಮ ವಾಗ್ಮಿ, ಸಂವಹನಕಾರ ಆಗ್ಬೇಕು ಅಂತಾದ್ರೆ ಮೊದಲು ಉತ್ತಮ ಕೇಳುಗ ಆಗ್ಬೇಕು.
* ಅವಲಂಭಿ ಆಗ್ಬೇಡಿ : ಗೊತ್ತಿಲ್ದೆ ಇರೋದನ್ನು ಬೇರೆ ಅವರತ್ರ ಕೇಳೋದು ತಪ್ಪಲ್ಲ. ಹಾಗಂತ ಬೇರೆಯವರನ್ನೇ ಅವಲಂಭಿಸಿದ್ರೆ ನೀವು ಕಲಿಯಲ್ಲ. ಹಾಗಾಗಿ ನೀವೇ ಕಲಿಯೋದನ್ನು , ಸ್ವಯಂ ಕಲಿಕೆಯನ್ನು ಅಭ್ಯಾಸ ಮಾಡ್ಕೊಳ್ಳಿ. ಆಗ ವಿಷ್ಯ ತಲೇಲಿ ಇರುತ್ತೆ. ಆಗ ನೀವು ಆರಾಮಾಗಿ ಮಾತಾಡ್ಬಹುದು.
* ಹಾಗೆಯೇ ಮಾತಾಡುವಾಹ ಅಕಸ್ಮಾತ್ ತಪ್ಪಾದ್ರು , ತಪ್ಪಾಗಲಿ, ಕೂಡಲೇ ಸರಿಪಡಿಸಿಕೊಳ್ಳಿ.
ಹೀಗೆ ಮಾಡಿದ್ರೆ ನೀವು ಒಳ್ಳೆಯ ರೀತೀಲಿ, ಎಲ್ಲರಿಗೂ ಇಷ್ಟವಾಗೋ ರೀತಿಲಿ, ಅರ್ಥವಾಗೋ ರೀತಿಲಿ ಸಂವಹನ ಮಾಡ್ಬಹುದು.