ವಿಶೇಷ ಲೇಖನಗಳು
Trending

ಲೈಫ್ ನಲ್ಲಿ ಒಮ್ಮೆಯಾದ್ರೂ ಟ್ರಾವೆಲ್ ಮಾಡ್ಲೇಬೇಕಾದ ರಸ್ತೆಗಳು..! ಇಂಡಿಯಾದ ಅಮೇಜಿಂಗ್ ರಸ್ತೆಗಳಿವು..!

ದಿನಾ ಕೆಲಸ ಇದ್ದಿದ್ದೇ ಸಾರ್! ಆಫೀಸ್ ಆಯ್ತು ಮನೆ ಆಯ್ತು..! ಅದೇ ಕಂಪ್ಯೂಟರ್, ಅದೇ ತಲೆ ತಿನ್ನೋ ಕೆಲ್ಸಗಳು…! ಹೀಗೆ ಲೈಫು ಕಳೆದೋಗುತ್ತೆ..! ಇದೇರೀತಿಯಾದ್ರೆ ಯಾವಾಗ ನಾವ್ ಎಂಜಾಯ್ ಮಾಡೋದು? ಸ್ವಲ್ಪ ಆದ್ರು ಬಿಡುವು ಬೇಕಲ್ಲಾ..? ಬೇಕೇ ಬೇಕು ಸಾರ್, ಇಲ್ದೇ ಇದ್ರೆ ನಮ್ ಆಯುಷ್ಯ ಬೇಗ ಮುಗ್ದೇ ಹೋಗುತ್ತೆ..! ಸೋ, ಅಪ್ಪ ಅಮ್ಮ, ಹೆಂಡ್ತಿ, ಮಕ್ಕಳು, ಫ್ರೆಂಡ್ ಜೊತೆಗೆ ಆಗಾಗ ಪ್ರವಾಸ ಮಾಡ್ತಾ ಇರಿ..! ಇಂಡಿಯಾದಲ್ಲಿ ಹುಟ್ಟಿದ ಮೇಲೆ ಕೆಲವೊಂದು ರಸ್ತೆಯಲ್ಲಿ ಪ್ರವಾಸ ಹೋಗ್ಲೇ ಬೇಕು..! ಈ ರಸ್ತೆಯಲ್ಲಿ ಪ್ರವಾಸ ಹೋದ್ರೆ ಎಂದೆಂದೂ ಇದನ್ನು ಮರೆಯಲ್ಲ..! ಈ ಅನುಭವಗಳು ತುಂಬಾ ಮೆಮೋರೆಬಲ್ ಆಗಿರ್ತವೆ..! ನಮ್ ಇಂಡಿಯಾದಲ್ಲಿನ ಅಂತ 11 ಅಮೇಜಿಂಗ್ ರಸ್ತೆಗಳ ಕಿರುಪರಿಚಯ ಇಲ್ಲಿದೆ..!

ಆ ಹನ್ನೊಂದು ರಸ್ತೆಗಳತ್ತ ಕಿರು ನೋಟ..
1. ಮನಾಲಿ – ಲೇಹ್ ಹೈವೇ..!
ಉತ್ತರ ಭಾರತದಲ್ಲಿನ ಹಿಮ ಹೊದಿಕೆಯ ಶಿಖರಗಳ ಸೌಂದರ್ಯವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ…! ಅದರಲ್ಲಿಯೂ ಮನೇಲಿ ಟು ಲೇಹ್ ಹೈವೇಯಲ್ಲಿ ಟ್ರಿಪ್ ಹೋದ್ರೆ ಅದರ ಅನುಭವವೇ ಬೇರೆ..! ಅದನ್ನೂ ಕೂಡ ವಿವರಿಸಲು ಆಗಲ್ಲ..! ಈ ಹೈವೇಯಲ್ಲಿ ಮೇ-ಜೂನ್ ತಿಂಗಳಲ್ಲಿ, ಅಂದ್ರೆ ಯಾವಾಗ ಹಿಮ ರಸ್ತೆಯನ್ನು ಮುಸುಕಿರಲ್ವೋ ಆಗ ಮತ್ತು ಅಕ್ಟೋಬರ್ ಮಧ್ಯಭಾಗದಲ್ಲಿ( ಶಿಖರ ಪ್ರದೇಶದಲ್ಲಿ ಹಿಮ ಬೀಳುತ್ತಿರುವಾಗ) ಪ್ರವಾಸ ಮಾಡ್ಬೇಕು..!

2. ಜೈಪುರ್ – ರಣತಂಭೂರ್ ..!

ಈ ಹೈವೇ ಪಿಂಕ್ ಸಿಟಿಯಿಂದ ಹುಲಿಗಳ ತಂಗುಧಾಮಕ್ಕೆ ಸಂಪರ್ಕಿಸಲ್ಪಡುತ್ತೆ..! ಈ ರಸ್ತೆಯಲ್ಲಿ ಹಳ್ಳಿ ಪ್ರದೇಶದ ಮೂಲಕ ಹೋದರೆ ವಿಶೇಷವಾದ ರಾಜಸ್ತಾನಿ ಅಡುಗೆ ರುಚಿಯನ್ನೂ ಸವಿಯ ಬಹದು…! ತುಂಬಾ ಸ್ವಚ್ವಂಧವಾಗಿರುವ ಈ ರಸ್ತೆಯಲ್ಲಿ ಹೋಗುವಾಗ ಮಾತ್ರ ಪಕ್ಕದಿ ಸಿಗುವ ಡಾಬಾದಲ್ಲಿ ಊಟ ಮಾಡೋದು ಮಾತ್ರ ಮರೆಯಬೇಡಿ..!

3. ಬೆಂಗಳೂರು – ನಂದಿ ಬೆಟ್ಟ..!

ಕರ್ನಾಟಕದಲ್ಲಿ ಪ್ರವಾಸ ಹೋಗ್ಲೇ ಬೇಕಾದ ಮಾರ್ಗವೆಂದರೆ ಅದು ನಂದಿಬೆಟ್ಟ..! ಬೆಳಿಗ್ಗೆ ಸೂರ್ಯ ಉದಯಿಸುವ ಮೊದಲೇ ನೀವು ಬೆಟ್ಟದ ರಸ್ತೆಯಲಿ ಇದ್ದರೆ ಸ್ವರ್ಗದಲ್ಲಿಯೇ ಇದ್ದೇವೇನೋ ಅನಿಸುತ್ತದೆ..! ಸಾಧ್ಯವಾದರೆ ಸ್ನೇಹತರೊಡನೆ ಸೈಕಲ್ ಏರಿ ನಂದಿ ಹಿಲ್ಸ್ ಗೆ ಹೋಗಿ ಅದರ ಮಜಾನೇ ಬೇರೆ..! ಲೈಫಲ್ಲಿ ಒಂದೇ ಒಂದು ಸಾರಿಯಾದ್ರೂ ಈ ಬೆಟ್ಟದ ತುದಿಯಲ್ಲಿ ನಿಂತು ಸೂರ್ಯಹುಟ್ಟುವುದನ್ನು ನೋಡ್ಬೇಕು..! ಆಗಲೇ ನಾವು ಹುಟ್ಟಿದ್ದಕ್ಕೂ ಸಾರ್ಥಕ ಅನಿಸೋದು..!

4. ಅಹಮದಾಬಾದ್ – ಕಚ್ ..!

ಕಚ್ ನಲ್ಲಿ ಬಿಳಿ ಬಂಜರು ಭೂಮಿ ಕಾಣುತ್ತೇವೆ..! ಭೂಮಿಗೆ ತಾಕಿದಂತಿರುವ ಆಕಾಶದ ಸೌಂದರ್ಯವನ್ನು ಇಲ್ಲಿಂದಲೇ ಸವಿಯಬೇಕು..! ಅಹಮದಾಬಾದ್ ನಿಂದ ನಿಧಾನಕ್ಕೆ ಸುತ್ತಲಿನ ಪ್ರಕೃತಿ ತಮಣೀಯತೆಯನ್ನು ಸವಿಯುತ್ತಾ ಕಚ್ ಕಡೇ ಹೋದರೆ ಆಹ್ಹಾ..ಆಹ್ಹಾ ಎಂಥ ಮುದ ಎನಿಸುವುದು ಕಣ್ಣಿಗೆ.. ಮನಸ್ಸಿಗೆ..!

5. ಮುಂಬೈ – ಪುಣೆ ಎಕ್ಸಪ್ರೆಸ್ ವೇ..!

ಈ ದಾರಿಯಲಿ ತಿರುವಗಳನ್ನು ಸುತ್ತುತ್ತಾ.. ಕಣ್ಣಾಡಿಸಿದಷ್ಟೂ ಕಾಣುವ ಹಸಿರು ಪ್ರಕೃತಿಯ ಸೊಬಗನ್ನು ಸವಿಯುತ್ತಾ ಹೋದರೆ ಆ ಅನುಭಕ್ಕೆ ಬೇರೆ ಯಾವುದೇ ಸಾಟಿ ಇಲ್ಲ..! ಆದರೆ ಸ್ವಲ್ಪ ಎಚ್ಚರ ತಪ್ಪಿದರೂ ಸಾವು ಖಚಿತ..!

6. ಮುಂಬೈ – ಗೋವಾ ಎನ್ ಹೆಚ್ 17

ಈ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಹಾದು ಹೋದ್ರೆ.. ಮಂದೇನೂ ಇದೆ.., ಇನ್ನೂ ಏನೋ ಇದೆ ಬನ್ನಿ ಬನ್ನಿ ಅಂತ ಪ್ರಕೃತಿ ಮಾತೆಯೇ ಕೈ ಚಾಚಿ ಕರೆಯುತ್ತಿರುತ್ತಾಳೆ..!

7 . ಬೆಂಗಳೂರು – ಮುನ್ನಾರ್

ಈ ರಸ್ತೆಯಲ್ಲಿ ಟೀ ಪ್ಲಾಂಟೇಶನ್ ಗಳ ಹಸಿರನ್ನು ಕಣ್ ತುಂಬಿಕೊಳ್ಳುತ್ತಾ ಹೋಗ್ಬಹುದು..! ಇಲ್ಲಿನ ಪಶ್ಚಿಮಘಟ್ಟ ಪರ್ವತ ಶ್ರೇಣಿಗಳ ಸೊಬಗನ್ನು ಸವಿಯಲೇ ಬೇಕು..!

8. ಗೌಹಾತಿ – ತ್ವಾಂಗ್

ರಜಾದಿನಗಳಲ್ಲಿ ಟೈಂಪಾಸ್ ಗೆಂದು ಒಮ್ಮೆಯಾದ್ರೂ ಇಲ್ಲಿಗೆ ಹೋಗಿಬನ್ನಿ..! ರಸ್ತೆಗಿಂತ ಬೆಟ್ಟ ಗುಡ್ಡಗಳೇ ಇಲ್ಲಿ ಕಾಣುವುದು..!

9.ಶಿಲಾಂಗ್ – ಚಿರಾಪುಂಜಿ

ಭೂಮಿ ಸೌಂದರ್ಯವನ್ನು ನಾವು ಕಾಣುವುದೇ ಈ ದಾರಿಯಲ್ಲಿ..! ಹಸಿರ ಬೆಟ್ಟದ ಮೇಲೆ ಹಾಲಿನ ಮಳೆಯೇ ಸುರಿದಂತೆ ಭಾಸವಾಗುವ ತಾಣವಿದು..!

10. ಪುರಿ – ಕೊನಾರಕ್..!

ರಸ್ತೆಯ ಎರಡೂ ಬದಿಗಳಲ್ಲಿಯೂ ಸಾಲು ಮರಗಳು.. ಖಾಲಿ ರೆಂಬೆಗಳು..ಇದರ ಫೋಟೋ ನೋಡಿಯಾದ್ರೂ ಹೋಗಿ ಬನ್ನಿ..!

11. ಓಲ್ಡ್ ಸಿಲ್ಕ್ ರೂಟ್

ಒಂದಾನೊಂದು ಕಾಲದಲ್ಲಿ ಇದು ವ್ಯಾಪಾರಕ್ಕೆ ಜನಪ್ರೀಯವಾಗಿದ್ದ ಈ ಮಾರ್ಗವು ಸಿಕ್ಕಿಂ ರಾಜ್ಯದಲ್ಲಿದೆ..! ಚೀನಾ ಗಡಿಗೆ ಹೊಂದಿಕೊಂಡಿದೆ..!

Related Articles

Leave a Reply

Your email address will not be published. Required fields are marked *

Back to top button
error: Content is protected !!