ವಿಶೇಷ ಲೇಖನಗಳು
Trending

ಅಗ್ನಿಹೋತ್ರದ ಮಹತ್ವ , ಪ್ರಯೋಜನಗಳು ಮತ್ತು ಆಚರಣೆಯ ವಿಧಾನ.

ಕಲುಷಿತ ಪರಿಸರ,ಕಲಬೆರಕೆ ಹಾಗೂ ಕೀಟನಾಶಕಗಳ ಅಂಶಗಳನೊಳಗೊಂಡ ಆಹಾರ, ಶಬ್ದ ಮಾಲಿನ್ಯ ,ಔಷಧಗಾಳ ಅಡ್ಡ ಪರಿಣಾಮ ಹಾಗು ಇನ್ನಿತರ ಆದುನಿಕ ಪೀಡೆಗಳಿಂದ ನಮ್ಮ ಅಂದಾಜು ಮೀರಿ ನಾವು ಅಪಾಯದ ಅಂಚಿನಲ್ಲಿ ನಾವಿದ್ದೇವೆ ಎಂಬಪರಿಕಲ್ಪನೆ ನಮಗಿಲ್ಲ.

ವೇದಜ್ಞಾನದ ಮೂಲಕ ಈ ಸಮಸ್ಯೆಗೆ ಸರಳ ಅಗ್ನಿಹೋತ್ರ ಎಂಬುದು ಎಲ್ಲರೂ ಆಚರಿಸಬಹುದಾದ ಸರಳ ಹೋಮ ಪದ್ದತಿ .ಸೂರ್ಯೋದಯ ಸೂರ್ಯಸ್ತದ ಸಮಯಕ್ಕೆ ಸರಿಯಾಗಿ ಹದಿನೈದು ನಿಮಿಷದಲ್ಲಿ ಇದನ್ನು ಮಾಡಬಹುದು ,ಮನೆಯಲ್ಲಿ ಇದನ್ನು ಯಾರೇ ಆಗಲಿ ಮಾಡಬಹುದು ಒಬ್ಬರಿಗೆ ಅನಾನುಕೂಲವಿದ್ದಾಗ ಇನ್ನೊಬ್ಬರು ಮಾಡಬಹುದಾದ ಅಥವಾ ಆಸಕ್ತಿ ಇದ್ದ ಸದಸ್ಯರೆಲ್ಲರೂ ಸೇರಿ ಮಾಡಬಹುದು .

ಇದರಿಂದ ಮನಸ್ಸು ಶಾಂತವಾಗುತ್ತದೆ,ನರಮಂಡಲ ಸಂದೇಶಗೊಂಡು ದೇಹ ಹಾಗು ಮನಗಳು ಸಚೇತನಗೊಂಡು ಲವಲವಿಕೆಯನ್ನು ಪಡೆಯುತ್ತದೆ . ಮನೆಯ ವಾತಾವರಣವಷ್ಟೇ ಅಲ್ಲ ಸುತ್ತಮುತ್ತಲಿನ ಮನೆಗಳಿಗೂ ಪರಿಣಾಮವಾಗುವಷ್ಟು ದಿವ್ಯ ಶಕ್ತಿಯ ಸಂಚಾಲನೆಯಾಗುವುದು . ಪರಿಸರದಲ್ಲಿಯೂ ಸುಧಾರಣೆಯಾಗಲು ಸಹಕಾರಿ ಬಹಳಷ್ಟು ಜನ ಇದನ್ನು ಮಾಡಲು ಪ್ರಾರಂಭಿಸಿದರೆ ಪರಿಸರದಲ್ಲಿ ಗಣನೀಯ ಬದಲಾವಣೆಯನ್ನು ಕಾಣಲು ಸಾಧ್ಯ . ಈಗಾಗಲೇ ಮಲೇಷಿಯಾ ,ಪೆರು,ಅಮೇರಿಕ ,ಜರ್ಮನಿ ,ರಾಷ್ಟ್ರಗಳಲ್ಲಿ ,ಮಹಾರಾಷ್ಟ್ರರಾಜ್ಯದಲ್ಲಿ ,ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಬಹಳಷ್ಟು ಜನರು ಇದನ್ನು ಆಚರಿಸುತ್ತಿದ್ದಾರೆ .ಶೀಘ್ರದಲ್ಲಿಯೇ ಇದು ವಿಶ್ವವ್ಯಾಪ್ತಿಯಾಗುವುದರಲ್ಲಿ ಸಂಶಯವಿಲ್ಲ .

ಅನಿಲ ದುರಂತವಾದಾಗ ಭೂಪಾಲದಲ್ಲಿ ಅಗ್ನಿಹೋತ್ರ ಆಚರಿಸುತ್ತಿದ್ದ ಕುಟುಂಬಗಳು ಯಾವುದೇ ದುಷ್ಪರಿಣಾಮಕೊಳಗಾಗದೆ ಉಳಿದಿದ್ದು ಜಗತ್ತಿನ ಗಮನವನ್ನು ಅಗ್ನಿಹೋತ್ರ ಸೆಳೆಯಲು ಕಾರಣವಾಯಿತು .

ಹೊಲದಲ್ಲಿ ಅಗ್ನಿಹೋತ್ರವನ್ನು ಆಚರಿಸಿ ,ಬೂದಿಯನ್ನು ಬೀಜಗಳೊಂದಿಗೆ ಸಾವಯವ ಗೊಬ್ಬರದೊಂದಿಗೆ ಬೆರಸುವುದರಿಂದ ಇಳುವರಿ ಹೆಚ್ಚಾಗುವುದು . ಕೀಟನಾಶಕ ಹಾಗು ರಸಗೊಬ್ಬರಗಳ ಬಳಕೆಯನ್ನು ಸಂಪೂರ್ಣ ತೊಡೆದುಹಾಕಬಹುದು .

ಇದರ ಬೂದಿಯಿಂದ ಅನೇಕ ಅಸಾಧ್ಯ ಕಾಯಿಲೆಗಳು ಗುಣಮುಖವಾಗಿವೆ,ರೋಗನಿರೋಧಕ ಶಕ್ತಿ ಬಲಗೊಳ್ಳುವುದು,ದುರ್ವ್ಯಾಸಗಳು ದೂರವಾಗುವುದು ,ಸಕಾರಾತ್ಮಕ ಭಾವನೆಗಳು ಸಬಲಗೊಳ್ಳುವವು ,ಮನೆ ,ಕಚೇರಿ,ಹಾಗೂ ಕಾರ್ಖಾನೆಗಳಲ್ಲಿ ಸೌಹಾರ್ದಯುತ ವಾತಾವರಣ ಬೆಳೆಯುವುದು,ಆನಂದಮಯ ಹಾಗೂ ಆರೋಗ್ಯಕರ ಜೀವನಕ್ಕೆ ಅಗ್ನಿಹೋತ ಆಚರಣೆ ಅತ್ಯುತ್ತಮ .

ಅಗ್ನಿಹೋತ್ರದಿಂದಾಗುವ ಪ್ರಯೋಜನಗಳು :

1. ‘ಚೈತನ್ಯದಾಯಕ ಮತ್ತು ಔಷಧಿಯ ವಾತಾವರಣ ನಿರ್ಮಾಣವಾಗುತ್ತದೆ.

2. ಹೆಚ್ಚು ಸತ್ತ್ವಯುತ ಮತ್ತು ಸ್ವಾದಿಷ್ಟ ಆಹಾರಧಾನ್ಯಗಳು ಬೆಳೆಯುತ್ತವೆ. ಇದರ ಭಸ್ಮವನ್ನು ಬೆಳೆಗಳಿಗೆ ಗೊಬ್ಬರವಾಗಿ ಹಾಕಿದರೆ ಒಳ್ಳೆಯ ಸತ್ವಯುತ ತರಕಾರಿ, ವನಸ್ಪತಿಗಳು ಒಳ್ಳೆಯ ಇಳುವರಿ ಕೊಡುತ್ತದೆ.

3. ಪ್ರಾಣಿಜೀವಗಳ ಪೋಷಣೆ: ಹೇಗೆ ಅಗ್ನಿಹೋತ್ರವು ವನಸ್ಪತಿಗಳ ಪೋಷಣೆಯನ್ನು ಮಾಡುತ್ತದೆಯೋ, ಅದೇ ರೀತಿ ಮನುಷ್ಯರ ಮತ್ತು ಎಲ್ಲ ಪ್ರಾಣಿಗಳ ಪೋಷಣೆಯನ್ನೂ ಮಾಡುತ್ತದೆ.’

4. ಅಗ್ನಿಹೋತ್ರದ ವಾತಾವರಣದಿಂದ ಮಕ್ಕಳ ಮೇಲೆ ಒಳ್ಳೆಯ ಪರಿಣಾಮಗಳಾಗುತ್ತವೆ

ಮಕ್ಕಳ ಮೇಲೆ ಒಳ್ಳೆಯ ಪರಿಣಾಮಗಳಾಗಿ ಅವರ ಮೇಲೆ ಒಳ್ಳೆಯ ಸಂಸ್ಕಾರಗಳಾಗುತ್ತವೆ.

ಸಿಡಿಮಿಡಿಗೊಳ್ಳುವ ಮತ್ತು ಹಠ ಮಾಡುವ ಮಕ್ಕಳು ಶಾಂತ ಮತ್ತು ಬುದ್ಧಿವಂತರಾಗುತ್ತಾರೆ.

ಅಧ್ಯಯನದಲ್ಲಿ ಮಕ್ಕಳಿಗೆ ಏಕಾಗ್ರತೆ ಬರುತ್ತದೆ.

ಮಂದಬುದ್ಧಿಯ ಮಕ್ಕಳು ಅವರ ಮೇಲೆ ಮಾಡಲಾಗುವ ಉಪಚಾರಕ್ಕೆ ಒಳ್ಳೆಯ ರೀತಿಯಲ್ಲಿ ಸ್ಪಂದಿಸುತ್ತಾರೆ.

5. ಅಗ್ನಿಹೋತ್ರದಿಂದ ಪ್ರಬಲ ಇಚ್ಛಾ ಶಕ್ತಿ ನಿರ್ಮಾಣವಾಗಿ ಮನೋವಿಕಾರಗಳು ಗುಣವಾಗುವವು ಮತ್ತು ಮಾನಸಿಕ ಬಲ ಪ್ರಾಪ್ತವಾಗುವುದು

6. ನರವ್ಯೂಹದ ಮೇಲಾಗುವ ಪರಿಣಾಮ: ‘ಜ್ವಾಲೆಯಿಂದ ಹೊರ ಬರುವ ಹೊಗೆಯು ಮೆದುಳು ಮತ್ತು ನರವ್ಯೂಹದ ಮೇಲೆ ಪ್ರಭಾವೀ ಪರಿಣಾಮವನ್ನು ಬೀರುತ್ತದೆ.’

7. ರೋಗಜಂತುಗಳ ಪ್ರತಿರೋಧ: ಅಗ್ನಿಹೋತ್ರದ ಔಷಧಿಯುಕ್ತ ವಾತಾವರಣದಿಂದಾಗಿ ರೋಗಕಾರಿ ಜಂತುಗಳ ಬೆಳವಣಿಗೆಯ ಮೇಲೆ ಪ್ರತಿಬಂಧ ಬರುತ್ತದೆ ಎಂದು ಕೆಲವು ಸಂಶೋಧಕರಿಗೆ ತಿಳಿದು ಬಂದಿದೆ.’

8. ಸಂರಕ್ಷಣಾಕವಚ ನಿರ್ಮಾಣವಾಗುತ್ತದೆ: ‘ನಮ್ಮ ಸುತ್ತಲೂ ಒಂದು ರೀತಿಯ ಸಂರಕ್ಷಣಾಕವಚವಿರುವುದರ ಅರಿವಾಗುತ್ತದೆ.’

9. ಅಗ್ನಿಹೋತ್ರದಿಂದ ಪ್ರಾಣಶಕ್ತಿಯು ಶುದ್ಧವಾಗಿ, ಆ ವಾತಾವರಣದಲ್ಲಿನ ವ್ಯಕ್ತಿಗಳ ಮನಸ್ಸು ಕೂಡಲೇ ಪ್ರಸನ್ನ ಮತ್ತು ಆನಂದಿತವಾಗುವುದು ಹಾಗೂ ಆ ವಾತಾವರಣದಲ್ಲಿ ಸಹಜವಾಗಿ ಧ್ಯಾನ ಧಾರಣೆಯಾಗಲು ಸಾಧ್ಯವಾಗುತ್ತದೆ.

ಅಗ್ನಿಹೋತ್ರ ಆಚರಿಸಲು ಬೇಕಾಗುವ ಸಾಮಗ್ರಿಗಳು :

1.ನಿಶ್ಷಿತವಾದ ಆಕೃತಿ ತಾಮ್ರದ ಹೋಮ ಕುಂಡ. (ಬೋರಲಾಗಿ ಇಟ್ಟ ಪಿರಮಿಡ್ ನಂತೆ ಇರುತ್ತದೆ) .

2.ಬೆರಣಿ (ಭಾರತೀಯ ತಳಿಹಸುವಿನ ಸಗಣಿಯಿಂದ ಮಾಡಿದ ಬೆರಣಿ ).

3.ಅಕ್ಕಿ (ತುಂಡಾಗಿರದ ಕಚ್ಚಾ ಅಕ್ಕಿ)

4.ತುಪ್ಪ( ಶುದ್ಧ ಆಕಳು ತುಪ್ಪ)

ಅಗ್ನಿಹೋತ್ರಆಚರಣೆಯ ವಿಧಾನ :

ತಾಮ್ರದ ಹೋಮಕುಂಡದಲ್ಲಿ ಒಂದು ಬೆರಣಿಯ ತುಂಡನ್ನು ಚಪ್ಪಟೆಯಾಗಿಇಡಿರಿ, ಅದರ ಮೇಲೆ ಪೊಳ್ಳು ಇರುವಂತೆ ಒಂದರ ಮೇಲೊಂದು ಬೆರಣಿಯ ತುಂಡುಗಳನ್ನು ಇಡಿರಿ . ಭರಣಿಯ ಒಂದು ತುಂಡಿಗೆ ತುಪ್ಪವನ್ನು ಹಾಕಿ ಬೆಂಕಿಯನ್ನು ತಗುಲಿಸಿರಿ, ಅದನ್ನು ಹೋಮಕುಂಡದಲ್ಲಿ ಈಗಾಗಲೇ ಹೇರಿಸಿಟ್ಟಿರುವ ಭರಣಿಯ ಮದ್ಯೆ ಹಾಕಿರಿ . ಬೆಳಿಗ್ಗೆ ಮೊದಲ ಮಂತ್ರವನ್ನು ಉಚ್ಚರಿಸಿ ಬೆರಳು ತುದಿಯಲ್ಲಿ ಬರುವಷ್ಟು ತುಪ್ಪ ಸವರಿದ ತುಂಡಾಗದ ಕಚ್ಚಾ ಅಕ್ಕಿಗಳನ್ನು ಅಗ್ನಿಗೆ ಸಮರ್ಪಿಸಿ ,ಆಗ ನಿರ್ಮಾಣವಾಗುವ ದಿವ್ಯ ವಾತಾವರಣದಲ್ಲಿ ಸಾಧ್ಯವಾದಷ್ಟು ಹೊತ್ತು ಕುಳಿತುಕೊಳ್ಳಿರಿ ಉರಿ ಮಾಡಲು ಸೀಮೆಎಣ್ಣೆಯನ್ನು ಉಪಯೋಗಿಸಬಾರದು.

ಸೂರ್ಯೋದಯದ ಮಂತ್ರಗಳು

ಬೆಳಿಗ್ಗ

1 . ಸೂರ್ಯಾಯ ಸ್ವಾಹಾ ಸೂರ್ಯಾಯ ಇದಂ ನ ಮಮ

2 . ಪ್ರಜಾಪತಯೇ ಸ್ವಾಹಾ ಪ್ರಜಾಪತಯೇ ಇದಂ ನ ಮಮ

ಸೂರ್ಯಾಸ್ತದ ಮಂತ್ರಗಳು

(ಸಂಜೆ )

1 . ಅಗ್ನಯೇ ಸ್ವಾಹಾ ಅಗ್ನಯೇ ಇದಂ ನ ಮಮ

2. ಪ್ರಜಾಪತಯೇ ಸ್ವಾಹಾ ಪ್ರಜಾಪತಯೇ ಇದಂ ನ ಮಮ

Related Articles

Leave a Reply

Your email address will not be published. Required fields are marked *

Back to top button
error: Content is protected !!