
ನೀವು ವಿದೇಶ ಪ್ರಯಾಣ ಮಾಡಲು ಪಾಸ್ ಪೋರ್ಟ್ ಬೇಕೆ ಬೇಕು. ಪಾಸ್ ಪೋರ್ಟ್ ಮಾಡಿಸುವ ಬಗ್ಗೆ ನಿಮಗೆಷ್ಟು ಗೊತ್ತು…? ಈ ಬಗ್ಗೆ ಐಡಿಯಾ ಇಲ್ಲ ಅಂತಾದ್ರೆ ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್…!

ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ ವಿವಿರ ದಾಖಲಿಸಿ , ಹಣ ಪಾವತಿಸಿ. ನಿಮ್ಮ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮೇಲ್ ಮಾಡ್ಬೇಕು.
https://portal2.passportindia.gov.in/AppOnlineProject/user/RegistrationBaseAction?request_locale=en

ಶುಲ್ಕ ಎಷ್ಟು…?
ವಯಸ್ಕರಿಗೆ 1500ರೂ
ಮಕ್ಕಳಿಗೆ 1000 ರೂ
ನೀವು ಪಾಸ್ ಪೋರ್ಟ್ ಕಚೇರಿಗೆ ಭೇಟಿ ನೀಡಬೇಕಾದ ದಿನ, ನಿಗಧಿತ ಸಮಯದಂದು ಕನಿಷ್ಠಅರ್ಧಗಂಟೆ ಮುಂಚಿತವಾಗಿ ಹೋಗಿ. ನೀವು ನಿಗಧಿತ ಸಮಯಕ್ಕಿಂತ ತಡವಾಗಿ ಹೋದಲ್ಲಿ ಪ್ರವೇಶ ನೀಡುವುದಿಲ್ಲ.

ಹೋಗುವಾಗ ಎಲ್ಲಾ ದಾಖಲೆಗಳ ಜೆರಾಕ್ಸ್ ಮಾಡಿಸಿಟ್ಟುಕೊಳ್ಳಿ. ಅವುಗಳಿಗೆ ನಿಮ್ಮ ಸಹಿ ಹಾಕಿ ದೃಢೀಕರಿಸುವುದನ್ನು ಮರೆಯಬೇಡಿ. ಜೆರಾಕ್ಸ್ ಮಾಡಿಸದಿದ್ದರೆ ಗಲಿಬಿಲಿಗೆ ಒಳಗಾಗ ಬೇಡಿ. ಮೊದಲ ಕೌಂಟರ್ ಬಳಿ ಹಣ ನೀಡಿ ಜೆರಾಕ್ಸ್ ಪಡೆಯಿರಿ.
ಮೊದಲ ಕೌಂಟರ್ ನಲ್ಲಿ ನಿಮಗೆ ಟೋಕನ್ ಬಂಬರ್ ಇರೋ ರಶೀಧಿಕೊಡ್ತಾರೆ. ನಿಮ್ಮ ಕೈಗೆ ಪಾಸ್ ಪೋರ್ಟ್ ಸಿಗೋ ತನಕ ಈ ಟೋಕನ್ ಸಂಖ್ಯೆ ಮುಖ್ಯ.

ಟೋಕನ್ ಸಂಖ್ಯೆ ಸಿಕ್ಕ ಮೇಲೆ ನಾನಾ ಕೌಂಟರ್ ಗಳಿರುವ ‘ಎ’ ವಿಭಾಗಕ್ಕೆ ಕಳುಹಿಸುತ್ತಾರೆ. ಅಲ್ಲಿ ಯಾವ ಕೌಂಟರ್ ಗೆ ನೀವು ಹೋಗಬೇಕು ಎಂಬುದು ಪರದೆಯಲ್ಲಿ ಬರುತ್ತಿರುತ್ತೆ( ಟೋಕನ್ ಸಂಖ್ಯೆ) . ನೀವು ಭೇಟಿ ನೀಡಬೇಕಾದ ಎ ಕೌಂಟರ್ ನಲ್ಲಿ ದಾಖಲೆ ಪ್ರತಿಗಳನ್ನು ನೀಡಬೇಕು. ಅಲ್ಲಿಯೇ ಕಂಪ್ಯೂಟರ್ ನಲ್ಲಿ ವಿಳಾಸ, ಬೆರಳಚ್ಚು , ಫೋಟೋ ದಾಖಲಿಸಿಕೊಳ್ತಾರೆ.

ಇದಾದ ನಂತರ ಬಿ ಕೌಂಟರ್ ನಲ್ಲಿ ಜೆರಾಕ್ಸ್ ಪ್ರತಿಗಳನ್ನು ವರ್ಜಿನಲ್ ದಾಖಲೆಗಳೊಂದಿಗೆ ಪರಿಶೀಲಿಸುತ್ತಾರೆ.
ಹಾಗಾಗಿ ನೀವು ಅಸಲಿ ದಾಖಲೆಗಳನ್ನು ಮರೆತು ಹೋಗಬಾರದು, ನೆನಪಿರಲಿ.
ಬಿ ಕೌಂಟರ್ ನಲ್ಲೂ ಅಷ್ಟೇ…ಎ ಕೌಂಟರ್ ನಂತೆ ನೀವು ಯಾವ ಕೌಂಟರ್ ಗೆ ಹೋಗಬೇಕು ಎಂಬುದು ಪರದೆಯಲ್ಲಿ ಬರುತ್ತೆ. ಅದನ್ನು ಗಮನಿಸಿ.

ಬಿ ಕೌಂಟರ್ ನಲ್ಲಿ ಡಾಕ್ಯುಮೆಂಟ್ ವೇರಿಫಿಕೇಶನ್ ಆದ್ಮೇಲೆ, ಸಿ ಕೌಂಟರ್ ಕಡೆಗೆ ನಿಮ್ಮ ಪಯಣ. ಸಿ ಕೌಂಟರ್ ನಲ್ಲಿ ಮತ್ತೊಮ್ಮೆ ದಾಖಲೆಗಳ ಪರಿಶೀಲನೆ ಆಗುತ್ತೆ. ಇಲ್ಲಿಗೆ ಪಾಸ್ ಪೋರ್ಟ್ ಕಚೇರಿ ಕೆಲಸ ಮುಗಿಯುತ್ತೆ.
7 ದಿನಗಳಲ್ಲಿ ಪೊಲೀಸ್ ವಿಚಾರಣೆಗಾಗಿ ನಿಮ್ಮ ಮೊಬೈಲ್ ಸಂಖ್ಯೆಗೆ ಎಸ್ ಎಂ ಎಸ್ ಬರುತ್ತೆ. ನಿಮ್ಮ ಹತ್ತಿರದ ಪೊಲೀಸ್ ಠಾಣೆಯಿಂದ ಕರೆ ಬರುತ್ತೆ.
ಪೊಲೀಸರು ನಿಮ್ಮ ಮನೆ ಬಳಿ ಬರುತ್ತಾರೆ. ನೀವು ಹಿಂದೆ ನೀಡಿದ ದಾಖಲೆ ಪ್ರತಿಗಳನ್ನು ನೀಡಬೇಕಾಗುತ್ತೆ. ಇಬ್ಬರು ಸಾಕ್ಷಿಧಾರರ ಸಹಿ ಅಗತ್ಯ.
ಪೊಲೀಸರು ದಾಖಲೆ ಪರಿಶೀಲಿಸಿ ನೀವು ಆ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದೀರಿ ಎಂದು ದೃಢೀಕರಿಸಬೇಕಾಗುತ್ತೆ.
ನೀವು ಬಾಡಿಗೆ ಮನೆಯಲ್ಲಿದ್ದರೆ ಮನೆ ಮಾಲೀಕರಿಂದ ಅಗ್ರಿಮೆಂಟ್ ಅಥವಾ ಒಪ್ಪಿಗೆ ಪತ್ರ ಪಡೆದುಕೊಂಡಿರಿ.
ಈ ಎಲ್ಲಾ ಪ್ರಕ್ರಿಯೆ ಬಳಿಕ ಕೆಲವು ದಿನಗಳಾದ ಮೇಲೆ ಕೊರಿಯರ್ ಮೂಲಕ ನಿಮ್ಮ ವಿಳಾಸಕ್ಕೆ ಪಾಸ್ ಪೋರ್ಟ್ ತಲುಪಲಿದೆ.
ಪಾಸ್ ಪೋರ್ಟ್ ಮಾಡಿಸಲು ಈ ದಾಖಲೆಗಳು ಬೇಕೇ ಬೇಕು…!
1) ಮತದಾರರ ಗುರುತಿನ ಚೀಟಿ(ವೋಟರ್ ಐಡಿ)
2) ಆಧಾರ್ ಕಾರ್ಡ್
3) ಟಿಸಿ ಅಥವಾ ಶಾಲಾ ವರ್ಗಾವಣೆ ಪತ್ರ. 50ವರ್ಷ ಮೇಲ್ಪಟ್ಟವರಿದ್ದರೆ ಟಿಸಿ ಬದಲು ಅಫಿಡಾವಿಟ್ ಮಾಡಿಸ್ಬೇಕು.
4) ಪಡಿತರ ಚೀಟಿ
5) ಜನನ ಪ್ರಮಾಣ ಪತ್ರ
6) ಸ್ಟಡಿ ಸರ್ಟಿಫಿಕೇಟ್ ಅಥವಾ ವ್ಯಾಸಂಗ ದೃಢೀಕರಣ ಪತ್ರ.
7) ಪತಿ-ಪತ್ನಿ ಜೊತೆಗಿರುವ ಫೋಟೋ (ವಿವಾಹವಾಗಿದ್ದರೆ)
8) ಮದುವೆ ಅಫಿಡಾವಿಟ್
9) ಮ್ಯಾರೇಜ್ ಸರ್ಟಿಫಿಕೇಟ್ ಅಥವಾ ವಿವಾಹ ದೃಢೀಕರಣ ಪತ್ರ.
