ಟಿಎಂಎಪೈ ಕೋವಿಡ್ ಆಸ್ಪತ್ರೆಗೆ ಹೆಚ್ಚಿನ ಸವಲತ್ತು ನೀಡಲು ಶಾಸಕ ಕೆ. ರಘುಪತಿ ಭಟ್ ಮನವಿ.

ಮಣಿಪಾಲ ಸಂಸ್ಥೆಯವರು ಉಡುಪಿಯ ಟಿ.ಎಂ.ಎ.ಪೈ. ಆಸ್ಪತ್ರೆಯನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಉಚಿತವಾಗಿ ನೀಡಿದ್ದಾರೆ. ಅಲ್ಲಿ ಈವರೆಗೆ ದಾಖಲಾದ ರೋಗಿಗಳಲ್ಲಿ 45 ಮಂದಿ ಚೇತರಿಸಿಕೊಂಡು ಈಗಾಗಲೇ ಬಿಡುಗಡೆಯಾಗಿ ಮನೆ ಸೇರಿದ್ದಾರೆ. ಅದರಲ್ಲೂ ಹೆಚ್ಚಿನವರು ಮಕ್ಕಳು ಎನ್ನುವುದು ವಿಶೇಷ. ಪ್ರಸ್ತುತ ಉಡುಪಿಯಲ್ಲಿ ಸೋಂಕಿತರ ಸಂಖ್ಯೆ ಅಧಿಕಗೊಂಡಿದ್ದು, ಮುಂದಿನ ದಿನಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡುವುದು ಆಸ್ಪತ್ರೆಗೆ ಹೊರೆಯಾಗುವುದರಿಂದ ಸರ್ಕಾರದಿಂದ ಪಿಪಿ ಕಿಟ್ ಸೇರಿದಂತೆ ಚಿಕಿತ್ಸೆಗೆ ಸಂಬಂಧಿಸಿದ ಸವಲತ್ತುಗಳನ್ನು ಒದಗಿಸುವಂತೆ ಉಡುಪಿ ಶಾಸಕ ಕೆ. ರಘುಪತಿ ಭಟ್ ವೈದ್ಯಕೀಯ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದರು.

ಉಡುಪಿ ಜಿಲ್ಲೆ ಗೆ ಇಂದು ದಿ. 03-06-2020 ರಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾll ಸುಧಾಕರ್ ಭೇಟಿ ನೀಡಿದ ಸಂದರ್ಭ ಮಣಿಪಾಲ ವೈದ್ಯಕೀಯ ಯೂನಿವರ್ಸಿಟಿಗೆ ಭೇಟಿ ನೀಡಿ, ಕೋವಿಡ್-19 ಚಿಕಿತ್ಸೆ ಸಂಬಂನಧ ಅಧಿಕಾರಿಗಳು ಹಾಗೂ ಮಣಿಪಾಲದ ಆಸ್ಪತ್ರೆಯ ವೈದ್ಯರೊಂದಿಗೆ ಚರ್ಚಿಸಿ ಟಿ.ಎಂ.ಎ.ಪೈ ಕೋವಿಡ್ ಆಸ್ಪತ್ರೆಗೆ ಹೆಚ್ಚಿನ ಸವಲತ್ತು ನೀಡುವ ಬಗ್ಗೆ ಭರವಸೆ ನೀಡಿದರು. ಬಳಿಕ Covid 19 ಪರೀಕ್ಷಾ ಕೇಂದ್ರಕ್ಕೆ ಹಾಗೂ ಗ್ರಂಥಾಲಯಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾಹೆಯ ಉಪ ಕುಲಪತಿಗಳಾದ ಎಚ್.ಎಸ್ ಬಲ್ಲಾಳ್, ಜಿಲ್ಲಾ ವೈದ್ಯಾಧಿಕಾರಿಗಳಾದ ಸುಧೀರ್ ಚಂದ್ರ ಸೂಡ, ನಗರ ಬಿಜೆಪಿ ಅಧ್ಯಕ್ಷರಾದ ಮಹೇಶ್ ಠಾಕೂರ್ ಮಣಿಪಾಲ ಯುನಿವರ್ಸಿಟಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.