
ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆ ಆತುರದಲ್ಲಿ ಶಾಲೆ ಆರಂಭ ಮಾಡುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಫೇಸ್‌ಬುಕ್ ವಿಡಿಯೋ ಮೂಲಕ ಈ ಮಾಹಿತಿಯನ್ನು ಅವರು ನೀಡಿದ್ದಾರೆ. ಇದೇ ವೇಳೆ ಶಾಲೆ ಆರಂಭಿಸುವಂತೆ ಯಾವುದೇ ಖಾಸಗಿ ಲಾಬಿಗೂ ಶರಣಾಗಿಲ್ಲ ಎಂದಿದ್ದಾರೆ.
ಶಾಲೆ ಪ್ರಾರಂಭಿಸುವ ಕುರಿತಾಗಿ ಸರ್ಕಾರ ಕೈಗೊಂಡಿರುವ ನಿರ್ಧಾರಗಳ ಬಗ್ಗೆ ಸಾಮಾಜಿಕ ಜಾಲತಾಣಗಳು ಹಾಗೂ ಪೋಷಕರ ವಲಯದಲ್ಲಿ ಭಾರೀ ಚರ್ಚೆ ನಡೆದಿತ್ತು. ಸದ್ಯಕ್ಕೆ ಶಾಲೆಗಳನ್ನು ಆರಂಭ ಮಾಡಬೇಡಿ ಎಂಬ ಒತ್ತಡಗಳು ಹೆಚ್ಚಾಗುತ್ತಿವೆ. ಅಲ್ಲದೆ ಖಾಸಗಿ ಲಾಬಿಗೆ ಶಿಕ್ಷಣ ಇಲಾಖೆ ಮಣಿಯುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಚಿವ ಸುರೇಶ್ ಕುಮಾರ್ ಕೆಲವೊಂದು ಸ್ಪಷ್ಟನೆಗಳನ್ನು ನೀಡಿದ್ದಾರೆ.