ಉಡುಪಿಯಲ್ಲಿ ನಿನ್ನೆ 92 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.ಆಶ್ಚರ್ಯ ಅಂದ್ರೆ 92 ಜನರಲ್ಲಿ 87 ಜನಕ್ಕೆ ಶೀತ, ಜ್ವರದಂತಹ ಲಕ್ಷಣಗಳೂ ಇಲ್ಲ ಅಂತ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ. ಉಡುಪಿ ಜಿಲ್ಲೆಯ ಕೋವಿಡ್-19 ಪೀಡಿತರ ಒಟ್ಟು ಸಂಖ್ಯೆ 564ಕ್ಕೆ ಏರಿಕೆಯಾಗಿದೆ.ಈ ಮೂಲಕ ಉಡುಪಿ ಕರ್ನಾಟಕದಲ್ಲಿ ನಂಬರ್ 1 ಸ್ಥಾನವನ್ನು ಪಡೆದಿದೆ ಎಂದು ತಿಳಿದು ಬಂದಿದೆ.
ಸೋಂಕಿತ 564 ಜನರಲ್ಲಿ 528 ಜನ ಮಹಾರಾಷ್ಟ್ರದಿಂದ ಬಂದವರೇ ಆಗಿದ್ದಾರೆ. ರೋಗ ಲಕ್ಷಣಗಳು ಹೆಚ್ಚಿರುವವರು ಟಿಎಂಎಪೈ ಕೋವಿಡ್ ಆಸ್ಪತ್ರೆಗೆ, ಉಳಿದವರನ್ನು ತಾಲೂಕು ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.