ಆರೋಗ್ಯ
Trending

ಋತುಸ್ರಾವದ ಸಮಯದಲ್ಲಿ ಹೆಣ್ಣು ಮಕ್ಕಳು ದೇವಸ್ಥಾನಕ್ಕೆ ಹೋಗಬಹುದೇ?

ಋತು ಸ್ರಾವ( ಮುಟ್ಟು ) ಎಂಬುದು ಹೆಣ್ಣು ಮಕ್ಕಳಿಗೆ ನೈಸರ್ಗಿಕವಾಗಿ ಬಂದಿರುವುದು ಹೆಣ್ಣು ಒಂದು ನಿಗದಿತ ವಯಸ್ಸಿನಲ್ಲಿ ಋತುಮತಿ ಆಗಿ ಅವಳು ಪ್ರತಿ ತಿಂಗಳು ಕೂಡಾ ಋತುಸ್ರಾವ ಆದರೆ ಅವಳ ಆರೋಗ್ಯ ಕೂಡಾ ಉತ್ತಮವಾಗಿ ಇರುತ್ತದೆ ಜೊತೆಗೆ ಅವಳು ಮುಂದೆ ತಾಯಿ ಆಗಲು ಸಾಧ್ಯ. ಆದರೆ ಹಿಂದಿನ ಸಂಪ್ರದಾಯದಲ್ಲಿ ನೆಡೆದುಕೊಂಡು ಬಂದಿರುವ ಆಚಾರ ವಿಚಾರಗಳಲ್ಲಿ ಹೆಣ್ಣು ಋತುಮತಿ ಆದಾಗ ಕನಿಷ್ಟ ನಾಲ್ಕು ದಿನ ಅವಳಿಗೆ ಒಂದು ರೀತಿಯ ಜೈಲು ಶಿಕ್ಷೆ ನೀಡುತ್ತಾರೆ ಅಂದರೆ ಅವಳನ್ನು ಒಂದು ಜಾಗದಲ್ಲಿ ಕೂರಿಸಿ ಅಲ್ಲಿಗೆ ಅವಳಿಗೆ ಊಟ ತಿಂಡಿ ಎಲ್ಲವನ್ನೂ ನೀಡುತ್ತಾರೆ ಅವಳು ಮನೆಯಲ್ಲಿ ತಿರುಗಬಾರದು ಏನನ್ನು ಕೂಡ ಮುಟ್ಟಬಾರದು ಎಂದು ಹೇಳುತ್ತಿದ್ದರು .

ಆದರೆ ಇಂದು ಕಾಲ ಬದಲಾದಂತೆ ಇಂದು ಹೆಣ್ಣು ಋತುಸ್ರಾವ ಆದಾಗ ಮನೆಯಲ್ಲಿ ಎಲ್ಲರಂತೆ ಇವಳು ಕೂಡಾ ಇರುತ್ತಾಳೆ ಆದರೆ ದೇಗುಲಕ್ಕೆ ಹೋಗುವುದನ್ನು ಮಾತ್ರ ಕಡಿತ ಮಾಡುತ್ತಾರೆ ಅದು ಏಕೆ ಎಂದು ನೋಡೋಣ ಬನ್ನಿ. ಹೆಣ್ಣು ಋತುಸ್ರಾವದ ಸಮಯದಲ್ಲಿ ದೇವಸ್ಥಾನಗಳಿಗೆ ಹೋಗಬಾರದು ಎನ್ನುವ ನಿಯಮ ಇದೆ ಆದರೆ ಅದು ಏಕೆಂದರೆ ಹೆಣ್ಣು ಋತು ಕ್ರಮದಲ್ಲಿ ಇರುವ ಸಮಯದಲ್ಲಿ ಅವಳು ಮಾನಸಿಕವಾಗಿ ದುರ್ಬಲತೆ ಹೊಂದಿರುತ್ತಾಳೆ ಹಾಗೆಯೇ ಅವಳಲ್ಲಿ ದೈಹಿಕವಾಗಿ ಅಶುದ್ಧತೆ ಕಾಡುತ್ತದೆ ಇಂತಹ ಸಮಯದಲ್ಲಿ ಮನಸ್ಸು ಬಲಹೀನವಾಗಿರುತ್ತದೆ ಇಂತಹ ಪರಿಸ್ಥಿತಿಯಲ್ಲಿ ಹೆಣ್ಣು ದೇವಸ್ಥಾನದ ಒಳಗೆ ಹೋಗುವುದು ಸರಿಯಲ್ಲ

ಅವಳ ಮನಸ್ಸು ದೇವಾಲಯದ ಒಳಗೆ ಹೋಗಲು ಹಿಂಜರಿಯುವ ಸ್ಥಿತಿ ಇರುತ್ತದೆ ಈ ರೀತಿ ಮನಸ್ಸು ಬಲಹೀನತೆಯಲ್ಲಿ ಕೂಡಿರುವ ಸಮಯದಲ್ಲಿ ದ್ವಂದ್ವ ಕಾಡುತ್ತದೆ ಮನಸ್ಸು ನಿರಾಳ ಇಲ್ಲದಿರುವ ಸಮಯದಲ್ಲಿ ಯಾವ ಕೆಲಸವೂ ಮಾಡಲು ಕೂಡಾ ಆಗುವುದಿಲ್ಲ ಹಾಗಾಗಿ ದೇವಾಲಯಕ್ಕೆ ಹೋಗುವುದಿಲ್ಲ. ಹಾಗೆಯೇ ಹೆಣ್ಣಿನ ಋತುಸ್ರಾವದ ಸಮಯದಲ್ಲಿ ದೇಹದಲ್ಲಿ ಅಧಿಕವಾದ ಉಷ್ಣತೆ ಕಾಡುತ್ತಿರುತ್ತದೆ ಸ್ತ್ರೀಯರಲ್ಲಿ ರಕ್ತಸ್ರಾವ ಆಗುತ್ತಿರುವ ಸಮಯದಲ್ಲಿ ಕೆಲವು ಕ್ರಿಮಿಕೀಟಗಳು ಅವಳ ದೇಹದ ಸುತ್ತಲೂ ಹರಡಿಕೊಂಡಿರುತ್ತದೆ.

ಜೊತೆಗೆ ಅವಳಲ್ಲಿ ಅತಿಯಾದ ಉಷ್ಣತೆ ಇರುತ್ತದೆ ಅಂತಹ ಸಮಯದಲ್ಲಿ ಅವಳು ವಿಗ್ರಹಗಳ ಬಳಿ ಹೋದಾಗ ಅತಿಯಾದ ಉಷ್ಣಕ್ಕೆ ವಿಗ್ರಹ ಹಾಳಾಗುತ್ತದೆ ಜೊತೆಗೆ ಈ ಸಮಯದಲ್ಲಿ ಗಿಡಗಳನ್ನು ಕೂಡಾ ಮುಟ್ಟಬಾರದು ಎಂದು ಹೇಳುತ್ತಾರೆ. ಜೊತೆಗೆ ಇಂದಿನ ಕಾಲದಲ್ಲಿ ಹೆಣ್ಣು ಋತುಸ್ರಾವ ಸಮಯದಲ್ಲಿ ಸ್ವಚ್ಛತೆ ಕಾಪಾಡಲು ಸರಿಯಾದ ವ್ಯವಸ್ಥೆ ಇರಲಿಲ್ಲ ಹಾಗಾಗಿ ಅಂತಹ ಸಮಯದಲ್ಲಿ ದೇವಾಲಯಕ್ಕೆ ಹೋದರೆ ದೇವಾಲಯವು ಕೂಡಾ ಆಶುದ್ಧತೆ ಆಗಬಹುದು ಎಂಬ ಕಾರಣಕ್ಕೆ ದೇವಾಲಯಕ್ಕೆ ಹೋಗಬಾರದು ಎಂಬ ನಿಯಮವನ್ನು ಮಾಡಿಕೊಂಡು ಬಂದಿರುವುದು. ಈಗಲೂ ಸಹ ಕೆಲವೊಂದು ಮನೆಯಲ್ಲಿ ಇಂತಹ ಪದ್ಧತಿ ಇರುತ್ತದೆ ಆದರೆ  ನೈಸರ್ಗಿಕವಾಗಿ ಆಗುವ ಕೆಲವೊಂದು ಕ್ರಿಯೆಗೆ ಹೆಣ್ಣನ್ನು ದೂಷಣೆ ಮಾಡುವುದು ತಪ್ಪು.

Related Articles

Leave a Reply

Your email address will not be published. Required fields are marked *

Back to top button
error: Content is protected !!