
ಬೆಂಗಳೂರು: ಲಾಕ್ ಡೌನ್, ನಂತರ ಉದಯ ಟಿವಿಯ ಧಾರವಾಹಿಗಳು ನಾಳೆಯಿಂದ ಮತ್ತೆ ಶುರು ಆಗುತ್ತಿದೆ. ನಾಳೆಯಿಂದ ಹೊಸ ಎಪಿಸೋಡ್ ಆರಂಭವಾಗಲಿದ್ದು, ಧಾರವಾಹಿಗಳ ಪ್ರಚಾರಕ್ಕೆ ವಾಹಿನಿ ಸಿನಿಮಾ ಸ್ಟಾರ್ ಗಳನ್ನು ಕರೆಸಿಕೊಂಡಿದೆ.
ನಟಿ ಪ್ರಿಯಾಂಕ ಉಪೇಂದ್ರ ಉದಯ ವಾಹಿನಿಯ ‘ಸೇವಂತಿ’ ಧಾರವಾಹಿಯಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸೋಮವಾರದಿಂದ ಶುಕ್ರವಾರವದರೆಗೆ ರಾತ್ರಿ 7.30 ಕ್ಕೆ ಪ್ರಸಾರವಾಗಲಿರುವ ಸೇವಂತಿ ಧಾರವಾಹಿಯ ಹೊಸ ಎಪಿಸೋಡ್ ನಲ್ಲಿ ಪ್ರಿಯಾಂಕ ಕಾಣಿಸಿಕೊಂಡಿದ್ದಾರೆ.