
ಜಿನಿವಾ : ಕೊರೊನ ರೋಗಲಕ್ಷಣಗಳಿಲ್ಲದ ಜನರಿಂದ ಕರೋನ ವೈರಸ್ ಹರಡುವುದು “ಅಪರೂಪ” ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಬ್ಲ್ಯೂಎಚ್ ಒ ಮಹಾನಿರ್ದೇಶಕ ಟೆಡ್ರೂಸ್ ಅಧಾನೊಮ್ ಘೆಬ್ರೆಯೆಸಸ್, ವಿಶ್ವಸಂಸ್ಥೆಗೆ ವರದಿಯಾಗಿರುವ ಶೇ, 75 ಪ್ರಕರಣಗಳು ಅಮೆರಿಕಾ ಮತ್ತು ದಕ್ಷಿಣ ಏಷ್ಯಾದ 10 ರಾಷ್ಟ್ರಗಳಿಂದ ಬಂದಿವೆ ಎಂದು ತಿಳಿಸಿದರು.
ಅನೇಕ ರಾಷ್ಟ್ರಗಳು ರೋಗಲಕ್ಷಣವಿಲ್ಲದ ಜನರಿಂದ ಅಥವಾ ಯಾವುದೇ ಕ್ಲಿನಿಕಲ್ ಲಕ್ಷಣಗಳಿಲ್ಲದವರಿಂದ ಸೋಂಕು ಹರಡುವ ಕುರಿತಂತೆ ವರದಿ ಮಾಡುತ್ತಿವೆ. ಆದರೆ, ಈ ಪ್ರಕರಣಗಳ ಬಗ್ಗೆ ವಿವರವಾಗಿ ಪ್ರಶ್ನಿಸಿದಾಗ ಹಲವರಲ್ಲಿ ಸಣ್ಣ ರೀತಿಯ ಕಾಯಿಲೆ ಹೊಂದಿರುವುದು ತಿಳಿದುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಾಂತ್ರಿಕ ವಿಭಾಗದ ಮಾರಿಯಾ ವ್ಯಾನ್ ಕೆರ್ಖೋವ್ ಹೇಳಿದರು.
ಬ್ರಿಟನ್, ಅಮೆರಿಕಾ ಸೇರಿದಂತೆ ಅನೇಕ ರಾಷ್ಟ್ರಗಳ ಆರೋಗ್ಯ ಅಧಿಕಾರಿಗಳು ರೋಗ ಲಕ್ಷಣವಿಲ್ಲದ ಜನರಿಂದಲೂ ಕೋವಿಡ್-19 ಹರಡಬಹುದು ಎಂಬ ಎಚ್ಚರಿಕೆ ನೀಡಿದ್ದಾರೆ.