
ಬೆಂಗಳೂರು : ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಆರಂಭವಾದ ಬೆನ್ನಲ್ಲೇ ಚಿನ್ನದ ಮಳಿಗೆಗಳು ಮತ್ತೆ ತೆರೆಯಲ್ಪಟ್ಟಿವೆ. ಹೀಗಾಗಿ ಚಿನ್ನಕ್ಕೆ ಬೇಡಿಕೆ ಕೂಡ ಹೆಚ್ಚುತ್ತಿದೆ. ಜೂ.2ರಿಂದ ಚಿನ್ನದ ದರದಲ್ಲಿ ಭಾರೀ ಇಳಿಕೆ ಕಂಡಿತ್ತು. ಆದರೆ, ಸೋಮವಾರ ಚಿನ್ನದ ದರದಲ್ಲಿ ದಾಖಲೆಯ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 490 ಏರಿಕೆ ಕಂಡಿದೆ. ಈ ಮೂಲಕ ಚಿನ್ನದ ಬೆಲೆ 43,750 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರದಲ್ಲಿ 490 ಏರಿಕೆಯಾಗಿ 47,720 ರೂಪಾಯಿ ಆಗಿದೆ.
ಜೂನ್ 1ರಂದು ಚಿನ್ನ 90 ರೂಪಾಯಿ ಏರಿಕೆ ಕಂಡಿತ್ತು. ಅದಾದ ನಂತರ ಸತತ ಮೂರು ದಿನವೂ ಚಿನ್ನದ ದರದಲ್ಲಿ ಇಳಿಕೆ ಕಂಡಿತ್ತು. ಶುಕ್ರವಾರ ಚಿನ್ನದ ದರದಲ್ಲಿ 250 ರೂಪಾಯಿ ಏರಿತ್ತು. ಶನಿವಾರ ಇಳಿಕೆ ಕಂಡಿದ್ದ ಚಿನ್ನ ಸೋಮವಾರ ಭಾರೀ ಏರಿಕೆ ಕಂಡಿದೆ.