ಆರೋಗ್ಯ

ಇದು ಕಹಿಬೇವಿನ ಮಹಿಮೆ ಬಾಯಿಗೆ ಕಹಿ, ಆರೋಗ್ಯಕ್ಕೆ ಸಿಹಿ.

ಕಹಿಬೇವು ಎಂದ ತಕ್ಷಣ ಯುಗಾದಿಯ ದಿನ ಬೆಲ್ಲದೊಟ್ಟಿಗೆ ಸಿಗುವ ಕಹಿ ಎಸಳು ನೆನಪಾಗಬಹುದು. ಬಾಯಿಗಿಟ್ಟ ತಕ್ಷಣ ನಾಲಗೆಗೆ ಕಹಿ ತಾಗಿ ಮುಖ ಮುರಿಯುವವರೇ ಹೆಚ್ಚು. ಕಹಿ ಹೆಚ್ಚಿನವರಿಗೆ ಬೇಡದ ರುಚಿ. ಆದರೆ ಕಹಿಬೇವನ್ನು ತುಂಬಾ ಕಾಯಿಲೆಗಳಿಗೆ ಮದ್ದಾಗಿ ಬಳಸಬಹುದು ಎಂದು ನಿಮಗೆ ತಿಳಿದಿದೆಯೇ?

1) ಅಸ್ತಮ ಸಮಸ್ಯೆ ಉಳ್ಳವರು 2 ಹನಿ ಬೇವಿನ ಎಣ್ಣೆಯನ್ನು ಒಂದು ಲೋಟ ನೀರಿಗೆ ಹಾಕಿ ಕುಡಿದರೆ ಅನುಕೂಲಕರವಾಗುತ್ತದೆ.

2) ಮಧುಮೇಹ ಮತ್ತು ಕೊಬ್ಬಿನ ಅಂಶದ ನಿಯಂತ್ರಣಕ್ಕೆ ಕಹಿಬೇವು ಸೊಪ್ಪು ಸಿದ್ಧೌಷಧಿ.

3) ದಿನಂಪ್ರತಿ ಎರಡು, ಮೂರು ಕಹಿಬೇವಿನ ಎಲೆಯನ್ನು ತಿಂದರೆ ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ.

ಇಷ್ಟೇ ಅಲ್ಲ, ಕಹಿಬೇವು ಅತ್ಯುತ್ತಮವಾದ ಸೌಂದರ್ಯ ವರ್ಧಕವಾಗಿಯೂ ಕಾರ್ಯ ನಿರ್ವಹಿಸುತ್ತದೆ!

1) ಕಹಿಬೇವು ಮುಖದಲ್ಲಾಗುವ ಮೊಡವೆ ನಿವಾರಣೆಗೆ ಹೇಳಿ ಮಾಡಿಸಿದ ಔಷಧಿ :

ಕಹಿಬೇವಿನ ಸೊಪ್ಪು ಮೊಡವೆ ಸಮಸ್ಯೆ ನಿವಾರಿಸುತ್ತದೆ. ಮೊಡವೆ ಇರುವವರು ಕಹಿಬೇವಿನ ಲೆಪ ತಯಾರಿಸಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಬೇಕು. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡುತ್ತಾ ಬಂದರೆ ಮೊಡವೆ ಮಾಯವಾಗುತ್ತದೆ.

2) ಕಹಿ ಬೇವು ಮುಖದ ಕಾಂತಿ ಹೆಚ್ಚಿಸಲು ಸುಲಭ ಮಾರ್ಗ :

ಕಹಿಬೇವಿನ ಎಲೆಗಳನ್ನು ಸಣ್ಣಗೆ ಅರೆದು ಚಂದನ ಮತ್ತು ಅರಿಶಿನದೊಂದಿಗೆ ಕಲಸಿ ಕುಟ್ಟಿ ಲೆಪ ತಯಾರಿಸಬೇಕು. ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದರೆ ಮುಖದ ಕಾಂತಿ ದ್ವಿಗುಣಗೊಳ್ಳುವುದು. ಇದರೊಂದಿಗೆ ಕಹಿಬೇವಿನ ಫೇಶಿಯಲ್ ಅಕಾಲಿಕ ಮುಪ್ಪನ್ನು, ಮುಖದ ಮೇಲಿನ ನೆರಿಗೆಗಳನ್ನು ನಿವಾರಿಸುವಲ್ಲಿಯೂ ಸಹಾಯಕಾರಿ.

3) ಕಹಿಬೇವು ತಲೆಹೊಟ್ಟನ್ನು ನಿವಾರಣೆಗೆ ಕಹಿಬೇವು :

ತಲೆಹೊಟ್ಟಿನ ಸಮಸ್ಯೆಗೆ ಕಹಿಬೇವು ರಾಮಬಾಣ. ತಲೆಹೊಟ್ಟಿನ ಸಮಸ್ಯೆ ಇದ್ದವರು ಕಹಿಬೇವನ್ನು ಪೇಸ್ಟ್ ಮಾಡಿ ತಲೆಗೆ ಹಚ್ಚಿ, ನಂತರ ತಣ್ಣೀರಿನಿಂದ ತಲೆ ಸ್ನಾನ ಮಾಡಬೇಕು. ಹೀಗೆ ಮಾಡುತ್ತಿದ್ದರೆ ಕೂದಲಿನ ಆರೋಗ್ಯಕ್ಕೂ ಒಳ್ಳೆಯದು ಜೊತೆಗೆ ತಲೆಹೊಟ್ಟಿನ ಸಮಸ್ಯೆ ದೂರಾಗುತ್ತದೆ.

ಇಷ್ಟು ದಿನ ನೀವು ಕಹಿ ಎಂಬ ಒಂದೇ ಕಾರಣಕ್ಕೆ ಕಹಿಬೇವನ್ನು ದೂರ ಇಟ್ಟಿದ್ದರೆ ಇನ್ನುಮುಂದಾದರೂ ಅದರ ಪ್ರಯೋಜನ ಪಡೆದುಕೊಳ್ಳಲು ಮರೆಯದಿರಿ. ರುಚಿಯಲ್ಲಿ ಕಹಿಯಾದರೇನು, ಆರೋಗ್ಯಕ್ಕೆ ಸಿಹಿ ಎಂಬುದನ್ನು ನೆನಪಿಡಿ.

 

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker