
ಹೊಸದಿಲ್ಲಿ:ಭಾರತದಲ್ಲಿ ಕೊರೊನಾ ವೈರಸ್ ಸೋಂಕು ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ ,ಕೊರೊನಾ ವೈರಸ್ ಪತ್ತೆ ಹಚ್ಚಲು ದೇಶದಲ್ಲಿ ನಡೆಸಿರುವ ಪರೀಕ್ಷೆಗಳ ಸಂಖ್ಯೆ 50 ಲಕ್ಷ ದಾಟಿದೆ. ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾಹಿತಿ ನೀಡಿದೆ. ದೇಶದಲ್ಲಿ ಜೂನ್ 6ರ ವರೆಗೆ ದೇಶದಲ್ಲಿ 50,30,700 ಕೋವಿಡ್ ಪರೀಕ್ಷೆ ನಡೆಸಲಾಗಿದೆ ಎಂದಿದೆ.
ಕಳೆದ 24 ತಾಸಿನಲ್ಲೇ 1,41,682 ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ದೇಶದಲ್ಲಿ ಟೆಸ್ಟಿಂಗ್ ಸಾಮರ್ಥ್ಯವನ್ನು 1.4 ಲಕ್ಷಕ್ಕೆ ಏರಿಸಲಾಗಿದೆ. ದೇಶದಲ್ಲಿ ಒಟ್ಟು 789 ಕೋವಿಡ್ ಲ್ಯಾಬೋರೇಟರಿಗಳಿವೆ. ಇದರಲ್ಲಿ ಸರಕಾರದ 553 ಹಾಗೂ 231 ಖಾಸಗಿ ಲ್ಯಾಬ್ ಸೇರಿವೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,66,598ಕ್ಕೆ ಏರಿಕೆಯಾಗಿದೆ.