
ಉಡುಪಿ ಜೂನ್ 10 : ಮೀನುಗಾರಿಕೆಯಲ್ಲಿ ತೀರ್ವ ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿ ಯುವಕನೊರ್ವ ತನ್ನ ಬೋಟ್ನಲ್ಲೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲ್ಪೆ ಬಂದರಿನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕ ಬಡನಿಡಿಯೂರಿನ ಬೈಲಕೆರೆಯ ಪಾವಂಜಿಗುಡ್ಡೆ ನಿವಾಸಿ ಭಾಗ್ಯರಾಜ್ (27) ಎಂದು ತಿಳಿದು ಬಂದಿದೆ.
ತನ್ನ ತಂದೆಯ ಎರಡು ಬೋಟ್ ನಲ್ಲಿ ರೈಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಭಾಗ್ಯರಾಜ್ ಇತ್ತೀಚೆಗೆ ಸಾಲ ಮಾಡಿ ಮನೆ ಮತ್ತು ಮೀನುಗಾರಿಕಾ ಬೋಟ್ನ್ನು ಖರೀದಿಸಿದ್ದ, ಆದರೆ ಲಾಕ್ ಡೌನ್ ನಿಂದಾಗಿ ವ್ಯವಹಾರದಲ್ಲಿ ತೀರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಮಾನಸಿಕವಾಗಿ ನೊಂದು, ಮಲ್ಪೆ ಬಂದರಿನಲ್ಲಿ ಲಂಗರು ಹಾಕಿರುವ ಬೋಟಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಭಾಗ್ಯರಾಜ್ ಉತ್ತಮ ಕಬಡ್ಡಿ ಪಟುವಾಗಿದ್ದರು. ಮಂಗಳವಾರ ರಾತ್ರಿ 11 ಗಂಟೆಗೆ ಮನೆಯಿಂದ ಹೋಗಿದ್ದ ಯುವಕ ಆತ್ಮಹತ್ಯೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.