ಎರಡು ದಿನದಿಂದ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ ಅಂತ ನಿಟ್ಟುಸಿರು ಬಿಟ್ಟ ಉಡುಪಿ ಗೆ ದೊಡ್ಡ ಶಾಕ್ ಕಾದಿದೆಯಾ??

ಉಡುಪಿ: ಉಡುಪಿ ಜಿಲ್ಲೆ ಕೊರೊನಾ ಪಾಸಿಟಿವ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದು ಜನರ ಆತಂಕಕ್ಕೆ ಕಾರಣವಾಗಿದೆ, ಕೊರೊನ ಪ್ರಕರಣಗಳಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ . ಕಳೆದ ಎರಡು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಒಂದೂ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಹಾಗಂತ ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತಿಲ್ಲ, ಯಾಕೆಂದರೆ ಉಡುಪಿ ಜಿಲ್ಲಾಧಿಕಾರಿ ಟೇಬಲ್ ಮೇಲೆ ಮಹಾರಾಷ್ಟ್ರದಿಂದ ಕರಾವಳಿಗೆ ಬರಲು ಸಾವಿರಾರು ಅಪ್ಲಿಕೇಷನ್ ಗಳು ಸಿದ್ಧವಿದ್ದು, ಮಹಾರಾಷ್ಟ್ರದಿಂದ 7 ಸಾವಿರ ಜನ ಬರೋದಕ್ಕೆ ರೆಡಿಯಾಗಿದ್ದಾರೆ ಎಂದು ತಿಳಿದು ಬಂದಿದೆ .
ಉಡುಪಿ ಜಿಲ್ಲೆಯಲ್ಲಿ 947 ಕೊರೊನಾ ಪ್ರಕರಣಗಳೊಂದಿಗೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಉಡುಪಿ ಜಿಲ್ಲೆಯ ಕೇಸುಗಳ ಪೈಕಿ 327 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 619 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು 1,200 ಮಂದಿ ಹೊರ ರಾಜ್ಯದಿಂದ ಬಂದವರು ಹೋಂ ಕ್ವಾರಂಟೈನ್ನಲ್ಲಿದ್ದಾರೆ.
ಉಡುಪಿಯಲ್ಲಿ 1200 ಬೆಡ್ ಕೆಪಾಸಿಟಿಯ 5 ಆಸ್ಪತ್ರೆಗಳನ್ನು ಕೋವಿಡ್ ಗಳಿಗಾಗಿ ಮೀಸಲಿಡಲಾಗಿದೆ.ಈವರೆಗಿನ ಚಿಕಿತ್ಸೆಯನ್ನು ಸರ್ಕಾರ ಮತ್ತು ಟಿಎಂಎಪೈ ಖಾಸಗಿ ಆಸ್ಪತ್ರೆ ಉಚಿತವಾಗಿ ಕೊಟ್ಟಿದೆ. ಲಾಕ್ಡೌನ್ ಸಂಪೂರ್ಣ ತೆರವು ಆದ ಮೇಲೆ ರೋಗಿಗಳ ಚಿಕಿತ್ಸಾ ವೆಚ್ಚ ಏನು ಎತ್ತ ಎಂಬುದನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ. ಹೀಗಾಗಿ ಕೊರೊನಾ ಪ್ರಕರಣದಲ್ಲಿ ಪ್ರಥಮ ಸ್ಥಾನದಲ್ಲಿರುವ ಜಿಲ್ಲೆ ಎಂಬ ಕಳಂಕ ಹೊತ್ತಿರುವ ಉಡುಪಿ ಮತ್ತೆ ಗ್ರೀನ್ ಝೋನ್ ಆಗಲು ಮತ್ತಷ್ಟು ಸಮಯ ಬೇಕಾಗಬಹುದು.