ಚಿತ್ರೀಕರಣದಲ್ಲಿ ಭಾಗಿಯಾಗಲು ಅನುಮತಿ ನೀಡುವಂತೆ ಹಿರಿಯ ಕಲಾವಿದರಿಂದ ಡಿಸಿಎಂಗೆ ಮನವಿ !

ಬೆಂಗಳೂರು: ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಕೆಲಸ ಮಾಡುತಿದ್ದ ಹಿರಿಯ ಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಕ್ಕೆ ಅನುಮತಿ ಕೊಡಿಸಿ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ರವರ ಬಳಿ ಹಿರಿಯ ಕಲಾವಿದರು ಮನವಿ ಮಾಡಿಕೊಂಡಿದ್ದಾರೆ.
ಕಿರುತೆರೆಯ ಒಳಾಂಗಣ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ಕೊಟ್ಟಿದೆ. ಆದರೆ 60 ವರ್ಷ ಮೇಲ್ಪಟ್ಟ ಕಲಾವಿದರು ಚಿತ್ರೀಕರಣದಲ್ಲಿ ಭಾಗವಹಿಸದಂತೆ ಷರತ್ತು ವಿಧಿಸಿದೆ. ಹೀಗಾಗಿ ಧಾರಾವಾಹಿಗಳ ತಂಡ ಹಿರಿಯ ಕಲಾವಿದರನ್ನು ಬಿಟ್ಟು ಚಿತ್ರೀಕರಣ ಮಾಡುವುದರಲ್ಲಿ ನಿರತರಾಗಿದ್ದಾರೆ.
ಹಿರಿಯ ಕಲಾವಿದರು ಶೋಟಿಂಗ್ ಮೂಲಕ ಸಂಪಾದನೆ ಮಾಡುತ್ತಿದ್ದು ಶೂಟಿಂಗ್ ಇಲ್ಲದೆ ಬೇರೆ ದಾರಿಯಿಲ್ಲ ಅದಕ್ಕಾಗಿ ತಾವು ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಕ್ಕೆ ಅನುಮತಿ ಕೊಡಿಸಬೇಕು ಹಾಗು ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಹಿರಿಯ ಕಲಾವಿದರಿಗೆ ಪ್ರತಿ ತಿಂಗಳು ಮಾಸಾಶನ ದೊರೆಯುತ್ತಿದೆ ಅದೇ ರೀತಿ ಕರ್ನಾಟಕದಲ್ಲೂ ಹಿರಿಯ ಕಲಾವಿದರಿಗೆ ಹಾಗೂ ತಂತ್ರಜ್ಞಾನರಿಗೆ ಮಾಸಾಶನ ದೊರೆಯುವಂತಾಗಬೇಕು ಎಂದು ಸಿಎಂ ಅಶ್ವತ್ಥ್ ನಾರಾಯಣ್ ರವರ ಬಳಿ ಹಿರಿಯ ಕಲಾವಿದರುಗಳಾದ ಲಕ್ಷ್ಮಿ ದೇವಮ್ಮ, ಡಿಂಗ್ರಿ ನಾಗಾರಾಜ್, ಬಿಎಲ್ ಮಂಜುಳಾ, ಗಣೇಶ್ ರಾವ್ ಸೇರಿದಂತೆ ಹಲವರು ಕೇಳಿಕೊಂಡು ಮನವಿ ಸಲ್ಲಿಸಿದ್ದರು .