
ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿರುವ ಪರಿಣಾಮ ಪ್ರಪಂಚದಲ್ಲಿ ಅತಿ ಹೆಚ್ಚು ಕೊರೊನಾ ಪೀಡಿತ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೆ ಏರಿದೆ.ಚೀನಾದ ವುಹಾನ್ ನಲ್ಲಿ ಮೊದಲು ಪತ್ತೆಯಾಗಿದ ಕೊರೊನಾ ವೈರಸ್ ವಿಶ್ವಾದ್ಯಂತ 4ಲಕ್ಷದ 18 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿದೆ.
ಭಾರತದಲ್ಲಿ ಪಾಸಿಟಿವ್ ಪ್ರಕರಣ 2ಲಕ್ಷದ 87ಸಾವಿರ ದಾಟಿದೆ.ಯುಕೆ, ಇಟಲಿ, ಪೆರು, ಜರ್ಮನಿ, ಫ್ರಾನ್ಸ್, ಟರ್ಕಿ ಇರಾನ್, ಚೀನಾ ಹಿಂದಿಕ್ಕಿದ್ದ ಭಾರತ ವಿಶ್ವದ ಅತಿ ಹೆಚ್ಚು ಕೊರೊನಾ ಪೀಡಿತ ದೇಶಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿತ್ತು. ಇಂದು ದೇಶದ ಒಟ್ಟು 2,97,001 ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುವ ಮೂಲಕ 2,89,360 ಸೋಂಕಿತರಿರುವ ಸ್ಪೇನ್ ದೇಶವನ್ನು ಹಿಂದಿಕ್ಕಿದೆ.
ಭಾರತದಲ್ಲಿ ಮೂರನೇ ಹಂತದ ಲಾಕ್ಡೌನ್ ನಿಂದ ಸೋಂಕಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದೆ.lock ಡೌನ್ ತೆಗೆದ ನಂತರ ಪ್ರತಿ ನಿತ್ಯ ಸರಾಸರಿ 9,000 ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಮಹಾರಾಷ್ಟ್ರ, ತಮಿಳುನಾಡು, ದೆಹಲಿ ಹಾಗೂ ಗುಜರಾತ್ ನಲ್ಲಿ ಅತಿ ಹೆಚ್ಚು ಸೋಂಕು ಹರಡುತ್ತಿದೆ .
ಸದ್ಯ ಅಮೆರಿಕ (2,074,397) ಮೊದಲ ಸ್ಥಾನದಲ್ಲಿ, ಬ್ರೆಜಿಲ್ (7,87,489) ಎರಡನೇ ಹಾಗೂ ರಷ್ಯಾ (5,02,436) ಮೂರನೇ ಸ್ಥಾನದಲ್ಲಿದ್ದು 2,97,001 ಸೋಂಕಿತರಿರುವ ಭಾರತ ನಾಲ್ಕನೇ ಸ್ಥಾನಕ್ಕೆ ಬಂದಿದೆ. ಹಿಂದೆ ನಾಲ್ಕನೇ ಸ್ಥಾನದಲ್ಲಿದ್ದ ಸ್ಪೇನ್ ನಲ್ಲಿ ಸೋಂಕು ಇಳಿಮುಖವಾಗಿದ್ದು ಆರನೇ ಸ್ಥಾನಕ್ಕೆ ಕುಸಿದಿದೆ. ಇಂಗ್ಲೆಂಡ್ (291,409) ಐದನೇ ಸ್ಥಾನಕ್ಕೆ ಏರಿದೆ.
ಅಮೆರಿಕದಲ್ಲಿ ಕೊರೊನದಿಂದ 1 ಲಕ್ಷದ 16ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರ ಪಟ್ಟಿಯಲ್ಲಿ ಅಮೇರಿಕ ಮೊದಲನೇ ಸ್ಠಾನದಲ್ಲಿದೆ.