ರಾಜ್ಯ
ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿದ ಬಂಡೆಕಲ್ಲು:ಬೈಕ್ ಸವಾರ ಪ್ರಾಣಾಪಾಯದಿಂದ ಪಾರು !
ಹೊನ್ನಾವರ : ಉತ್ತರಕನ್ನಡ ಜಿಲ್ಲೆಯ ಕರಾವಳಿ ತಾಲೂಕಿನಲ್ಲಿ ಹಾದು ಹೋಗಿರುವ ಚಥುಷ್ಪಥ ಹೆದ್ದಾರಿಯಿಂದಾಗಿ ಮಳೆಗಾದ ಆರಂಭದಲ್ಲೇ ಅವಾಂತರ ಆರಂಭವಾಗಲಾರಂಭಿಸಿದೆ. ಇಂದು ಹೆದ್ದಾರಿಗೆ ಉರುಳಿದ ಬೃಹತ್ ಬಂಡೆಗಲ್ಲಿನಿಂದ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬೈಕ್ ಸವಾರನೋರ್ವ ಸಿನಿಮೀಯ ರೀತಿಯಲ್ಲಿ ಪ್ರಾಣಾಪಾಯದಲ್ಲಿ ಪಾರಾಗಿರುವ ಘಟನೆ ನಡೆದಿದೆ.
ಗಿರೀಶ ಬುಧವಂತ ನಾಯ್ಕ ಎಂಬಾತ ತನ್ನ ಬೈಕ್ ನಲ್ಲಿ ಹೊನ್ನಾವರದ ಹೊಸಪಟ್ಟಣ ಬಳಿ ಹೋಗುತ್ತಿದ್ದ ವೇಳೆ ಈ ಅವಘಢ ನಡೆದಿದೆ. ಹೆದ್ದಾರಿ ಬದಿಯ ಗುಡ್ಡದಿಂದ ಉರುಳಿ ಬಂದ ಬೃಹತ್ ಬಂಡೆಗಲ್ಲು ಅಪಾಯಕ್ಕೆ ಕಾರಣವಾಗಿದೆ. ಕಲ್ಲು ಉರುಳಿ ಬಿದ್ದ ಪರಿಣಾಮವಾಗಿ ಬೈಕ್ ಸವಾರ ಗಿರೀಶ ನಾಯ್ಕ ಅವರಿಗೆ ಗಾಯವಾಗಿದ್ದು, ಬೈಕ್ ಸಂಪೂರ್ಣ ಜಖಂ ಆಗಿದೆ.