ಖಾಲಿ ಕ್ರೀಡಾಂಗಣದಲ್ಲೇ ಐಪಿಎಲ್ ಟೂರ್ನಿ ಆಯೋಜಿಸಲು ಸಿದ್ಧ : ಸೌರವ್ ಗಂಗೂಲಿ
ಮುಂಬೈ: ದೇಶಾದ್ಯಂತ ಕೊರೋನಾ ವೈರಸ್ ಹೆಚ್ಚಾಗಿದ್ದು, ಈ ನಡುವೆ ಲಾಕ್ ಡೌನ್ ಸಡಿಲಿಕೆ ಬಳಿಕ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ ಇದೇ ವರ್ಷ ಐಪಿಎಲ್ ಆಯೋಜನೆ ಮಾಡುವ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಚಿಂತನೆ ನಡೆಸಿದೆ.
ಅಕ್ಟೋಬರ್ ನಲ್ಲಿ ಐಸಿಸಿ ಟಿ20 ವಿಶ್ವಕಪ್ ನಡೆಯಬೇಕಿತ್ತು. ಆದರೆ ಐಸಿಸಿ ಇಲ್ಲಿಯವರೆಗೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಅಲ್ಲದೆ ಪ್ರತಿ ಬಾರಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನಲ್ಲೂ ಚರ್ಚೆ ಗಳಾಗುತ್ತಿವೆ ಹೊರತು ಐಸಿಸಿ ಅಧಿಕಾರಿಗಳು ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ.
ಹೀಗಿರುವಾಗ ಐಪಿಎಲ್ 13ನೇ ಆವೃತ್ತಿಯನ್ನು ಖಾಲಿ ಮೈದಾನದಲ್ಲಿ ಇದೇ ವರ್ಷ ನಡೆಸಲು ಚಿಂತನೆ ನಡೆಸಿದೆ. ಖಾಲಿ ಮೈದಾನದಲ್ಲಿ ಐಪಿಎಲ್ ನಡೆಸಲು ಯೋಜಿಸ ಲಾಗುತ್ತಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಇನ್ನು ಸೌರವ್ ಗಂಗೂಲಿ ಅವರು ರಾಜ್ಯ ಅಸೋಸಿಯೇಶನ್ ಗಳಿಗೆ ಕಳುಹಿಸಿರುವ ಪತ್ರದಲ್ಲಿ ಐಪಿಎಲ್ ಭವಿಷ್ಯದ ಬಗ್ಗೆ ಬಿಸಿಸಿಐ ಶೀಘ್ರದಲ್ಲೇ ನಿರ್ಧಾರ ಪ್ರಕಟಿಸಲಿದೆ.