
ರಾಯಚೂರು: ರಾಜ್ಯದ ಲ್ಯಾಬ್ ಗಳಲ್ಲಿ ಕೊರೊನಾ ಟೆಸ್ಟಿಂಗ್ ಪ್ರಕರಣಗಳು ಜಾಸ್ತಿ ಆಗುತಿದ್ದು ಉದ್ದೇಶಪೂರ್ವಕವಾಗಿ ವರದಿ ಬರಲು ವಿಳಂಬ ಆಗುತ್ತಿಲ್ಲ. ಈಗಿನ ಪ್ರೋಟೋಕಾಲ್ ಪ್ರಕಾರವೇ ಕೇವಲ ರೋಗ ಲಕ್ಷಣ ಇರುವಂಥವರಿಗೆ ಮೊದಲ ಆದ್ಯತೆಯಲ್ಲಿ ಟೆಸ್ಟಿಂಗ್ ಮಾಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದರು.
ರಿಮ್ಸ್ ಹಾಗೂ ಓಪೆಕ್ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ರಾಜ್ಯದಲ್ಲಿ ಈ ಮೊದಲು ದಿನವೂ ಹದಿನೈದು ಸಾವಿರ ಜನರ ಕೊರೊನಾ ಟೆಸ್ಟ್ ಮಾಡ ಲಾಗುತ್ತಿತ್ತು. ಆದರೆ ಇದೀಗ ಡಬ್ಲುಎಚ್ ಒ ಮಾರ್ಗಸೂಚಿ ಯಂತೆ ಕೇವಲ ಕೊರೊನಾ ಸೋಂಕಿನ ಲಕ್ಷಣಗಳು ಇರುವವರಿಗೆ ಮಾತ್ರ ತಪಾಸಣೆ ಮಾಡಿ ಚಿಕಿತ್ಸೆ ನೀಡುವ ವ್ಯವಸ್ಥೆ ಜಾರಿಗೆ ತರಲಾಗಿದೆ ಹೀಗಾಗಿ ಕೊರೊನಾ ಸೋಂಕಿನ ವರದಿ ಪಡೆಯಲು ತಡವಾ ಗುತ್ತಿದೆ. ಸರಕಾರ ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುತ್ತಿಲ್ಲ ರಾಜ್ಯದಲ್ಲಿ ಈ ಮೊದಲು ಎರಡೇ ಲ್ಯಾಬ್ ಗಳಿದ್ದು ಈಗ ಲ್ಯಾಬ್ ಗಳ ಸಂಖ್ಯೆ ಹೆಚ್ಚಿಸಲಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದರು.