
ಚೆನ್ನೈ: ಚಿರಂಜೀವಿ ಸರ್ಜಾ ಅಕಾಲಿಕವಾಗಿ ಮರಣ ದಿಂದ ಕನ್ನಡ ಸಿನಿಮಾರಂಗ ಹಾಗು ಕುಟುಂಬದವರು ದುಃಖದಲ್ಲಿದ್ದಾರೆ. ಧ್ರುವ ಸರ್ಜಾ ಸೋಶಿಯಲ್ ಮೀಡಿಯಾದಲ್ಲಿ ಅಣ್ಣನ ಅಗಲಿಕೆಯ ತಮ್ಮ ನೋವನ್ನು ಹೇಳಿಕೊಂಡಿದ್ದರು. ಇದೀಗ ನಟಿ ಐಶ್ವರ್ಯಾ ಅರ್ಜುನ್ ಚಿರಂಜೀವಿಯನ್ನು ನೆನೆದು ಭಾವುಕರಾಗಿದ್ದಾರೆ.
ನಟ ಅರ್ಜುನ್ ಅವರ ಪುತ್ರಿ ಐಶ್ವರ್ಯಾ ಇನ್ಸ್ಟಾಗ್ರಾಂನಲ್ಲಿ ಚಿರಂಜೀವಿ ಸರ್ಜಾ ಅವರ ಜೊತೆಗಿನ ಬಾಲ್ಯದ ಫೋಟೋವನ್ನು ಹಾಕುವ ಮೂಲಕ ಕಂಬನಿ ಮಿಡಿದಿದ್ದಾರೆ.