
ಹೊಸದಿಲ್ಲಿ: ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ನೌಕರರಿಗೆ ಪೂರ್ಣ ಪ್ರಮಾಣದ ವೇತನ ಕೊಡದಿರುವ ಖಾಸಗಿ ಕಂಪನಿಗಳ ವಿರುದ್ಧ ಜುಲೈ ಅಂತ್ಯದವರೆಗೂ ಕಠಿಣ ಕ್ರಮ ಜರುಗಿಸಬಾರದು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಶುಕ್ರವಾರ ಆದೇಶಿಸಿದೆ .
ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ತ್ರಿ ಸದಸ್ಯ ಪೀಠವು, ”ಉದ್ಯೋಗದಾತರು ಮತ್ತು ಕೆಲಸಗಾರರು ಪರಸ್ಪರಒಬ್ಬಾನೊಬ್ಬರು ಅವಲಂಬಿತರು ಹಾಗಾಗಿ ಇವರಿಬ್ಬರ ಸಹಕಾರವಿಲ್ಲದೇ ಯಾವುದೇ ಉದ್ಯಮ ಉಳಿಯಲು ಸಾಧ್ಯವೇ ಇಲ್ಲ. ಹೀಗಿರುವಾಗ ವೇತನ ಪಾವತಿ ಕುರಿತಂತೆ ಪರಸ್ಪರರು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ಅಗತ್ಯವಾಗಿದೆ,” ಎಂದು ಅಭಿಪ್ರಾಯಪಟ್ಟಿತು.