
ಟೀ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಒಂದನ್ನು ಹಾಕಿದ್ದು ಈ ವಿಡಿಯೋ ಭಾರೀ ವೈರಲ್ ಆಗುತ್ತದೆ.
ಧವನ್ ತನ್ನ ಮಗ ಜೋರಾವರ್ ಹಾಗೂ ಪತ್ನಿ ಆಯೇಷಾ ಜೊತೆ ಸೇರಿ ರಸ್ತೆ ಬದಿಯ ಹಸಿದ ಗೋವುಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ .ಕೊರೊನಾ ಲಾಕ್ ಡೌನ್ ನಿಂದಾಗಿ ಸಾವಿರಾರು ಜನರು, ಕೆಲಸ ಕಳೆದುಕೊಂಡಿದ್ದಾರೆ. ಇನ್ನು ಅನೇಕ ಜನರಿಗೆ, ತಿನ್ನಲು ಆಹಾರ ಸಿಗದೇ ಪರದಾಡುತ್ತಿದ್ದಾರೆ ,ಮನುಷ್ಯರಷ್ಟೇ ಅಲ್ಲ, ಮೂಕಪ್ರಾಣಿಗಳು ಸಹ ಆಹಾರ ಸಿಗದೇ ಪರಿತಪಿಸುತ್ತಿವೆ.