ರಾಷ್ಟ್ರೀಯ
Trending

ರಾತ್ರಿ ಸಂಚಾರ ನಿಷೇಧ ಜಾರಿಗೊಳಿಸುವಂತೆ ರಾಜ್ಯಗಳಿಗೆ ಕೇಂದ್ರದ ಸೂಚನೆ!

ಹೊಸದಿಲ್ಲಿ: ಭಾರತದಲ್ಲಿ ಲಾಕ್ ಡೌನ್ ಸಡಿಲಗೊಳಿಸಿದ ಮಾರ್ಗಸೂಚಿ ಅನ್ವಯ ಸೂಚಿಸಲಾಗಿರುವ ರಾತ್ರಿ 9 ರಿಂದ ಮುಂಜಾನೆ 5ರವರೆಗಿನ ಅವಧಿಯಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಜನ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲೇಬೇಕು ಎಂದು ಕೇಂದ್ರ ಸರಕಾರವು ಶುಕ್ರವಾರ ರಾಜ್ಯಗಳಿಗೆ ಸೂಚನೆ ನೀಡಿದೆ.

”ರಾತ್ರಿ 9 ರಿಂದ ಮುಂಜಾನೆ 5ರವರೆಗಿನ ಜನರ ಸಂಚಾರಕ್ಕೆ ನಿರ್ಬಂಧ ವಿಧಿಸಿರುವ ಉದ್ದೇಶ ಜನಸಂದಣಿ ತಡೆಯುವುದಾಗಿದೆ.ಎಂದು ಕೇಂದ್ರ ಗೃಹ ಸಚಿವಾಲಯ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಅಗತ್ಯ ಸೇವೆಗಳಿಗೆ ಅಡ್ಡಿಪಡಿಸಬಾರದು. ಸರಕುಗಳ ಲೋಡಿಂಗ್ ಮತ್ತು ಅನ್ಲೋಡಿಂಗ್, ರಾಜ್ಯ-ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಸ್, ಟ್ರಕ್ಗಳ ಸಂಚಾರ ಮತ್ತು ರೈಲು, ವಿಮಾನಗಳಿಂದ ಇಳಿದು ಮನೆ ತಲುಪುವವರಿಗೆ ನಿರ್ಬಂಧ ಅನ್ವಯಿಸುವುದಿಲ್ಲ.

Related Articles

Leave a Reply

Your email address will not be published. Required fields are marked *

Back to top button
error: Content is protected !!