ನಮ್ಮ ಮುಖದ ಕಾಂತಿಯನ್ನ ಹೆಚ್ಚಿಸುವುದು ನಮ್ಮ ನಗು, ನಮ್ಮ ಹಲ್ಲುಗಳು ಸುಂದರವಾಗಿದ್ದರೆ ನಮ್ಮ ನಗು ಸುಂದರವಾಗಿರುತ್ತದೆ, ನಮ್ಮ ಅಂದವು ಇನ್ನಷ್ಟು ಹೆಚ್ಚುತ್ತದೆ. ಇಂತಹ ಹಲ್ಲುಗಳ ಆರೋಗ್ಯವನ್ನ ಕೈಪಿಡಿಕೊಳ್ಳುವ ಕೆಲವು ಮನೆ ಮದ್ದುಗಳು ಇಲ್ಲಿವೆ ನೋಡಿ.
ನಿಮ್ಮ ಹಲ್ಲುಗಳ ಮೇಲೆ ಕಟ್ಟಿರುವ ಹಳದಿ ಬಣ್ಣದ ಪಾಚಿ ಹಾಗೂ ಕೀಟಾಣುಗಳನ್ನು ತೊಲಗಿಸಲು ಪ್ರಮುಖ ಪಾತ್ರ ವಹಿಸಬಲ್ಲ ಶಕ್ತಿ ಇರುವುದು ಸೇಬು ರಸದ ಎಣ್ಣೆಯಲ್ಲಿ, ಇದನ್ನು ಬಳಸುವುದರಿಂದ ಹಲ್ಲು ಶುಭ್ರವಾಗುತ್ತದೆ ಅತಿ ಮುಖ್ಯವಾಗಿ ನಿಮ್ಮ ಹಲ್ಲುಗಳಿಗೆ ಧೂಮಪಾನದಿಂದ ಆಗಿರುವ ಕಲೆಗಳನ್ನು ಶುಭ್ರ ಮಾಡುವ ಶಕ್ತಿ ಇದೆ.
ತೆಂಗಿನ ಎಣ್ಣೆಯಲ್ಲಿ ನಿಮ್ಮ ಹಲ್ಲುಗಳನ್ನು ಉಜ್ಜುವುದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ ಹಾಗೂ ಹಲ್ಲಿನ ದವಡೆ ಗೆ ಶಕ್ತಿ ಸಿಗುತ್ತದೆ, ಅಷ್ಟೇ ಅಲ್ಲದೆ ಹಲ್ಲುಗಳನ್ನು ಶುಬ್ರ ಗೊಳಿಸಲು ಸಹಾಯ ಮಾಡುತ್ತದೆ.
ಅಡುಗೆ ಸೋಡವನ್ನು ಬಹಳ ಹಿಂದಿನ ಕಾಲದಿಂದಲೂ ಬಾಯಿ ಅಥವಾ ಹಲ್ಲಿನ ಶುಭ್ರತೆಗೆ ಬಳಸಲಾಗುತ್ತದೆ, 1 ಟೇಬಲ್ ಸ್ಪೂನ್ ಅಡುಗೆ ಸೋಡಾ ಹಾಗೂ ಸ್ವಲ್ಪ ಉಪ್ಪು ಬೆರೆಸಿ ಇದರಿಂದ ಹಲ್ಲು ಉಜ್ಜಿದರೆ ಆಯ್ತು.
ಹಲ್ಲುಗಳಿಗೆ ವಿಟಮಿನ್ ಸಿ ಅಗತ್ಯ ಹೆಚ್ಚಿಸುತ್ತದೆ ಹಾಗೂ ವಿಟಮಿನ್ ಸಿ ಸ್ಟ್ರಾಬರಿ ಹಣ್ಣು ಗಳಲ್ಲಿ ಹೇರಳವಾಗಿರುತ್ತದೆ, ಹಾಗಾಗಿ ರುಚಿಗಾಗಿ ತಿನ್ನುವ ಸ್ಟ್ರಾಬರಿ ಹಣ್ಣು ಹಲ್ಲಿನ ಆರೋಗ್ಯಕ್ಕೂ ಸಹಕಾರಿ.
ಕಬ್ಬನ್ನು ಅಗೆಯುವ ಅಭ್ಯಾಸವಿದ್ದವರಿಗೆ ಯಾವ ರೀತಿಯಲ್ಲಿಯು ಹಲ್ಲಿನ ಸಮಸ್ಯೆ ಬರಲು ಸಾಧ್ಯವೇ ಇಲ್ಲ, ಕಬ್ಬನ್ನು ಆಗಿದ್ದು ತಿನ್ನುವವರಿಗೆ ಹಲ್ಲುಗಳಲ್ಲಿ ಕೀಟಾಣುಗಳು ಇರುವುದಿಲ್ಲ ಹಾಗೆ ವಸಡುಗಳು ಬಹಳ ಗಟ್ಟಿಯಾಗಿರುತ್ತವೆ.
ನಿಂಬೆಹಣ್ಣು ಮತ್ತು ಸ್ವಲ್ಪ ಉಪ್ಪನ್ನು ಬೆರೆಸಿ ಹಲ್ಲನ್ನು ಉಜ್ಜ ಬೇಕು ಹೀಗೆ ಮಾಡುವುದರಿಂದ ಮೊದಲ ಎರಡು ದಿನ ನಿಮಗೆ ಜುಮ್ಮೆನ್ನುವ ಅನುಭವ ಆಗುತ್ತದೆ ಆದರೆ ಮೂರನೇ ದಿನಕ್ಕೆ ಅದು ಅಭ್ಯಾಸವಾಗಿ ಬಿಡುತ್ತದೆ, ಹಲ್ಲುಗಳ ಆರೋಗ್ಯಕ್ಕೆ ಇದು ಉತ್ತಮ ಮಾರ್ಗ.