
ಉಡುಪಿ : ಕಾರ್ಕಳದ ಕೆರ್ವಾಶೆಯ ಯುವತಿಯೋರ್ವಳು ಮನೆಮಂದಿಯೊಂದಿಗೆ ಮನೆಯಂಗಳದಲ್ಲಿ ಬಾರಿಸಿದ ಕವರ್ ಡ್ರೈವ್ ಹೊಡೆತವೊಂದು ವಿಶ್ವಮಟ್ಟದಲ್ಲಿ ಪ್ರಸಿದ್ಧಿಯಾಗಿದೆ.
ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ಯುವತಿ ಜ್ಯೋತಿ ಪೂಜಾರಿ ಅವರ ಕವರ್ ಡ್ರೈವ್ ಹೊಡೆತದ ಕೇವಲ ಆರೇ ಆರು ಸೆಂಕಡು ಇರೋ ವಿಡಿಯೋ ತುಂಬಾನೇ ವೈರಲ್ ಆಗಿದೆ.
ಕ್ರೀಡಾ ಮಾಧ್ಯಮ ಸಂಸ್ಥೆ ಈಎಸ್ ಪಿಎನ್ ಕ್ರಿಕ್ ಇನ್ಫೋ, ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಪ್ರಕಟಿಸಿದ್ದು, ಕರಾವಳಿ ಯುವತಿಯ ಕವರ್ ಡ್ರೈವ್ ಗೆ ಜಗದಗಲ ಮೆಚ್ಚುಗೆ ವ್ಯಕ್ತವಾಗಿದೆ.
ಮುಂಬೈನಲ್ಲಿ ನೆಲೆಸಿರುವ ಜ್ಯೋತಿ ಪೂಜಾರಿ ಇತ್ತೀಚೆಗಷ್ಟೇ ಕೆರ್ವಾಶೆಯ ಮನೆಗೆ ಬಂದಿದ್ದರು. ಮೂರು ದಿನದ ಹಿಂದೆ ಮನೆಯಂಗಳದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಆಡುವಾಗ ರಂಜಿತ್ ಪೂಜಾರಿಯವರು ವಿಡಿಯೋ ಮಾಡಿ ತನ್ನ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ಗಮನಿಸಿದ ಸಂಸ್ಥೆ ಈಎಸ್ ಪಿಎನ್ ಕ್ರಿಕ್ ಇನ್ಫೋ ಈ ವಿಡಿಯೋವನ್ನು ತನ್ನ ಖಾತೆಯಲ್ಲಿ ಪ್ರಕಟಿಸಿದೆ.
Stepping out to the leg side and smashing it through the covers. Now, where have we seen that before?
(#Yourshots 🎥 by Ranjith Poojary) pic.twitter.com/arKZW1zw9P
— ESPNcricinfo (@ESPNcricinfo) June 11, 2020