
ಉಡುಪಿ: ಕೊರೋನಾ ವೈರಸ್ ನ ಅಬ್ಬರ ಉಡುಪಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ಉಡುಪಿಯಲ್ಲಿ ಕೊರೋನಾ ಸೋಂಕು ಹೆಚ್ಚುತ್ತಲೇ ಇದ್ದು,ಉಡುಪಿಯಲ್ಲಿ ಪ್ರಕರಣ ಸಾವಿರದ ಸಮೀಪ ಬಂದಿದೆ .
ಉಡುಪಿಯಲ್ಲಿ ಒಂದು ಸಾವಿರ ಪ್ರಕರಣಗಳಾಗಲು ಇನ್ನು ಕೇವಲ 9 ಪ್ರಕರಣಗಳು ಮಾತ್ರ ಬೇಕಿವೆ. ಮಹಾರಾಷ್ಟ್ರ ದಿಂದ ಬಂದ ವೈರಸ್ ಗೆ ಉಡುಪಿ ತತ್ತರಿಸಿ ಹೋಗಿದೆ. ಈಗಾಗಲೇ ಜಿಲ್ಲೆಯಲ್ಲಿ 991 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.ಉಡುಪಿಯಲ್ಲಿ ಒಂದು ಸಾವಿರ ಪ್ರಕರಣ ದಾಖಲಾದರೆ 1000 ಸೋಂಕಿತರನ್ನು ಹೊಂದಿದ ಮೊದಲ ಜಿಲ್ಲೆ ಎನ್ನುವ ಕುಖ್ಯಾತಿಗೆ ಉಡುಪಿ ಜಿಲ್ಲೆ ಪಾತ್ರವಾಗುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ 7000 ಮಂದಿ ಉಡುಪಿಗೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದ್ದು ಅವರನ್ನೆಲ್ಲ ಉಡುಪಿ ಶ್ರೀ ಕೃಷ್ಣನೇ ಕಾಪಾಡಬೇಕಿದೆ..