ಕರಾವಳಿ
Trending

ಸಾವಿನಲ್ಲೂ ಒಂದಾದ ತಾಯಿ‌-ಮಗ : ತಾಯಿಯ ಸಾವಿನ ಸುದ್ದಿ ಕೇಳಿ ಮಗ ಹೃದಯಾಘಾತದಿಂದ ಮೃತ್ಯು..!

ಕುಂದಾಪುರ : ತನ್ನ ತಾಯಿ ಸಾವನ್ನಪ್ಪಿದ ವಿಷಯ ತಿಳಿದು ಒಂದೇ ಗಂಟೆಯೊಳಗೆ ಮಗನೂ ಹೃದಯಾಘಾತದಿಂದ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಕುಂದಾಪುರದಲ್ಲಿ ಸಂಭವಿಸಿದೆ ಎನ್ನಲಾಗಿದೆ.
ಉಡುಪಿ ಜಿಲ್ಲೆಯ ಕುಂದಾಪುರದ ಸಾರ್ವಜನಿಕ ಆಸ್ಪತ್ರೆ ಬಳಿಯ ಮಹಾರಾಜ್‌ ಜುವೆಲ್ಲರ್‌ನ ಮಾಲಕರಾಗಿದ್ದ ದಿ| ರಮೇಶ್‌ ಅವರ ಪತ್ನಿ ಶಕುಂತಲಾ ಶೇಟ್‌ (82) ಜೂ.12 ರ ತಡರಾತ್ರಿ 12.45 ರ ಸುಮಾರಿಗೆ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಇದಾದ ಒಂದೇ ಗಂಟೆಯೊಳಗೆ ಅವರ ಪುತ್ರ ಪ್ರಶಾಂತ್‌ ಶೇಟ್‌ (45) ಅವರು ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರು ಪ್ರಸ್ತುತ ಮಹಾರಾಜ್‌ ಜುವೆಲ್ಲರ್‌ನ ಮಾಲಕರಾಗಿದ್ದರು .
ಕುಂದಾಪುರದ ಜುವೆಲ್ಲರ್ಸ್‌ ಅಸೋಸಿಯೇಶನ್‌ ಸೂಚನೆಯಂತೆ ಕುಂದಾಪುರದಲ್ಲಿರುವ ಚಿನ್ನದ ಮಳಿಗೆಗಳು ಶನಿವಾರ ಬಂದ್‌ ಮಾಡಿ ಮೃತರಿಗೆ ಗೌರವ ಸಲ್ಲಿಸಿದರು‌ ಎಂದು ತಿಳಿಯಲಾಗಿದೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker