ರಾಜ್ಯ
Trending
ಇಂದು ವಿಶ್ವ ರಕ್ತದಾನಿಗಳ ದಿನ: ಮಂಗಳೂರು ಬಿಡಿಎಂ ತಂಡದಿಂದ ಏಳು ವರ್ಷದಲ್ಲಿ 23 ಸಾವಿರ ಯೂನಿಟ್ ರಕ್ತ ಪೂರೈಕೆ.

ಮಂಗಳೂರು: ಬ್ಲಡ್ ಡೋನರ್ಸ್ ಮಂಗಳೂರು(ಬಿಡಿಎಂ) ತಂಡವು ಕಳೆದ ಏಳು ವರ್ಷಗಳಲ್ಲಿಒಟ್ಟು 240 ಶಿಬಿರಗಳನ್ನು ಮಾಡಿದ್ದು, ನೇರ ರಕ್ತದಾನ ಹಾಗೂ ಹಲವೆಡೆ ಶಿಬಿರಗಳ ಮೂಲಕ 23 ಸಾವಿರ ಯೂನಿಟ್‌ಗಳಿಗಿಂತಲೂ ಅಧಿಕ ರಕ್ತ ಪೂರೈಕೆ ಮಾಡಿರುವುದು ಬಿಡಿಎಂ ಸಾಧನೆ.
ಬ್ಲಡ್ ಡೋನರ್ಸ್ ಮಂಗಳೂರು ತಂಡ ಮಂಗಳೂರು ಪರಿಸರದ ಸಾವಿರಾರು ರೋಗಿಗಳಿಗೆ ತನ್ನ ತಂಡದ ಮೂಲಕ ರಕ್ತದಾನ ಮಾಡಿ ಅಥವಾ ಮತ್ತೊಬ್ಬರ ಮೂಲಕ ರಕ್ತದಾನಕ್ಕೆ ಪ್ರೇರೇಪಿಸಿ ನೆರವಾಗಿದೆ. ಒಂದೇ ದಿನದಲ್ಲಿ ರಕ್ತದಾನಿಗಳ ಮಾಹಿತಿ ಸಂಗ್ರಹಿಸಿ 60 ಯೂನಿಟ್ ರಕ್ತ ನೀಡಿದ ದಾಖಲೆ ಕೂಡ ತಂಡಕ್ಕಿದೆ.
ಗೋವಾ, ಕೊಚ್ಚಿನ್, ಬೆಂಗಳೂರಿನಲ್ಲಿ ನೆಗೆಟಿವ್ ಗ್ರೂಪ್‌ನ ರಕ್ತ ಸಿಗದೇ ಇದ್ದಾಗ, ಬ್ಲಡ್ ಡೋನರ್ಸ್ ಮಂಗಳೂರು ತಂಡದ ಸದಸ್ಯರು ಹೋಗಿ ರಕ್ತದಾನ ಮಾಡಿ ಬಂದಿರುವುದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.