
ಆಡಳಿತಾರೂಢ ಬಿಜೆಪಿಯಿಂದ ನಾಮನಿರ್ದೇಶನಗೊಂಡ ನಬಮ್ ರೆಬಿಯಾ ಶುಕ್ರವಾರ ಅರುಣಾಚಲ ಪ್ರದೇಶದ ಏಕೈಕ ರಾಜ್ಯಸಭಾ ಸ್ಥಾನವನ್ನು ಅವಿರೋಧವಾಗಿ ಗೆದ್ದುಕೊಂಡಿದ್ದಾರೆ. ಈ ಬಗ್ಗೆ ಚುನಾವಣಾ ಇಲಾಖೆಯ ಅಧಿಕಾರಿ ಪ್ರಕಟಿಸಿದ್ದಾರೆ.
1996 ರಿಂದ 2002 ಮತ್ತು 2002 ರಿಂದ 2008** ರವರೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತತ ಎರಡು ಬಾರಿ ರಾಜ್ಯಸಭೆಯಲ್ಲಿ ಈಶಾನ್ಯ ರಾಜ್ಯವನ್ನು ಪ್ರತಿನಿಧಿಸಿದ್ದ ರೆಬಿಯಾ ಅವರು ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು
ಈ ಏಕೈಕ ಸ್ಥಾನಕ್ಕೆ ಬೇರೆ ಯಾವುದೇ ಅಭ್ಯರ್ಥಿಗಳು ಕಣದಲ್ಲಿ ಇರಲಿಲ್ಲ ಎಂದು ಅರುಣಾಚಲ ಪ್ರದೇಶ ಚುನಾವಣಾ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಕುತ್ ಮಿಥಿ ಅವರು ಅರುಣಾಚಲಪ್ರದೇಶ ರಾಜ್ಯದಿಂದ ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿದ್ದಾರೆ. ಅವರ ಅಧಿಕಾರಾವಧಿ ಜೂನ್ 23 ಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ ಚುನಾವಣೆ ಏರ್ಪಟ್ಟಿದ್ದು, ರೆಬಿಯಾ ಆಯ್ಕೆಯಾಗಿದ್ದಾರೆ.