ಬೀಜಿಂಗ್: ಚೈನಾ ದಲ್ಲಿ ಕೊರೊನ ವೈರಸ್ ನ ಪ್ರಕರಣ ಸಂಪೂರ್ಣ ಕಡಿಮೆಯಾಗಿದೆ ಎನ್ನುವ ಬೆನ್ನಲ್ಲೇ ಮತ್ತೆ ಕೊರೊನಾ ಸ್ಫೋಟಗೊಂಡಿದೆ. ನಿನ್ನೆ(ಜೂನ್ 14)ರಂದು ಚೈನಾ ದ ರಾಜಧಾನಿ ಬೀಜಿಂಗ್ ನಲ್ಲಿ 50 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದವು. ಇಂದು ಮತ್ತೆ 49 ಹೊಸ ಪ್ರಕರಣಗಳು ದಾಖಲಾಗಿದ್ದು, ಬೀಜಿಂಗ್ ವೊಂದರಲ್ಲೇ ಕೊರೊನಾ ಪ್ರಕರಣಗಳ ಸಂಖ್ಯೆ 100ರ ಗಡಿಗೆ ಬಂದು ನಿಂತಿದೆ. ಬೀಜಿಂಗ್ನಲ್ಲೇ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕವನ್ನು ದ್ವಿಗುಣಗೊಳಿಸಿದೆ.
ಇನ್ನು ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೀಜಿಂಗ್ ಮಾಸ್ ಟೆಸ್ಟಿಂಗ್(ಸಾಮೂಹಿಕ ಪರೀಕ್ಷೆ)ನ ಮೊರೆ ಹೋಗಿದ್ದು, ಕ್ಸಿನ್ಫಾಡಿ ಮಾರ್ಕೆಟ್ ಹಾಗೂ ಸುತ್ತಲಿನ ಪ್ರದೇಶಗಳಲ್ಲಿಇರುವ ಜನರನ್ನು ಪರೀಕ್ಷೆಗೆ ಒಳಪಡಿಸಲು ಸಿದ್ಧತೆ ನಡೆಸಿದೆ.ಈಗಾಗಲೇ 10,000 ಜನರನ್ನು ಪರೀಕ್ಷೆಗೆ ಗುರಿಪಡಿಸಲಾಗಿದ್ದು, ಕೊರೊನಾ ವೈರಸ್ ಕಾಣಿಸಿಕೊಂಡ ಸುತ್ತಮುತ್ತಲಿನ ಪ್ರದೇಶಕ್ಕೆ ಲಾಕ್ಡೌನ್ ಜಾರಿ ಮಾಡಲಾಗಿದ್ದು, ಎಲ್ಲಾ ಜನರ ಪರೀಕ್ಷೆ ಪ್ರಕ್ರಿಯೆ ಮುಗಿಯುವವರೆಗೂ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿರುತ್ತದೆ ಎಂದು ಘೋಷಿಸಿದೆ.
China locks down ten more Beijing neighbourhoods over virus cluster: AFP news agency. #COVID19
— ANI (@ANI) June 15, 2020