
ಮಂಗಳೂರು: ತಂದೆಯನ್ನೇ ಇಬ್ಬರು ಮಕ್ಕಳು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿ ನಡೆದಿದೆ.ಇಲ್ಲಿನ ಕರಾಯ ಗ್ರಾಮದ ಮುಗ್ಗದ ಆನೆಪಲ್ಲ ಎಂಬಲ್ಲಿನ ನಿವಾಸಿ ಧರ್ನಪ್ಪ ಪೂಜಾರಿ (65) ಕೊಲೆಯಾದ ವ್ಯಕ್ತಿ. ಇವರನ್ನು ಮಕ್ಕಳಾದ ಮೋನಪ್ಪ ಹಾಗೂ ನವೀನ್ ಎಂಬವರು ಭಾನುವಾರ ತಡರಾತ್ರಿ ಕತ್ತಿಯಿಂದ ಕಡಿದು ಕೊಲೆ ಮಾಡಿದ ಭಾನುವಾರ ರಾತ್ರಿ ಸಂಭವಿಸಿದೆ.
ಭಾನುವಾರ ರಾತ್ರಿ ಸಿಯಾಳ ವಿಚಾರದಲ್ಲಿ ತಂದೆ ಮಕ್ಕಳೊಳಗೆ ಜಗಳವಾಗಿದ್ದು ಈ ಸಂದರ್ಭ ತಂದೆಗೆ ಮಕ್ಕಳು ಕತ್ತಿಯಿಂದ ಕಡಿದಿದ್ದು, ಗಂಭೀರ ಗಾಯಗೊಂಡ ಧರ್ನಪ್ಪ ಪೂಜಾರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.