
ನವದೆಹಲಿ : ಕೊರೊನಾ ವೈರಸ್ ನಿರ್ವಹಣೆಯಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಸಾಲು ಸಾಲು ಆರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಗುಜರಾತ್ ಮಾಡೆಲ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಯವರನ್ನು ವ್ಯಂಗ್ಯ ಮಾಡಿದ್ದಾರೆ.
ಇಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು ಕೊರೊನಾ ನಿಯಂತ್ರಣದಲ್ಲಿ ಗುಜರಾತ್ ಸರ್ಕಾರ ವಿಫಲವಾಗಿದೆ. ಗುಜರಾತಿನಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚು ಕೊರೊನಾದಿಂದ ಸತ್ತವರ ಪ್ರಮಾಣ 6.25% ರಷ್ಟಿದೆ ಗುಜರಾತ್ ಗೆ ಹೋಲಿಸಿಕೊಂಡರೇ ಕಾಂಗ್ರೆಸ್ ಆಡಳಿತದ ರಾಜ್ಯಗಳು ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸುತ್ತಿದೆ ಎಂದಿದ್ದಾರೆ.
ಮಹಾರಾಷ್ಟ್ರ 3.73%, ರಾಜಸ್ಥಾನ 2.32%, ಪಂಜಾಬ್ 2.17%, ಪುದುಚೇರಿ 1.98%, ಜಾರ್ಖಂಡ್ 0.5%, ಛತ್ತೀಸ್ಗಢದಲ್ಲಿ 0.35% ರಷ್ಟು ಸಾವನ್ನಪ್ಪಿದ್ದಾರೆ. ಗುಜರಾತ್ ಮಾಡೆಲ್ ಈಗ ದೇಶದ ಮುಂದೆ ಬೆತ್ತಲಾಗಿದೆ ರಾಹುಲ್ ಗಾಂಧಿ ಟೀಕಿಸಿದ್ದಾರೆ. ರಾಹುಲ್ ಗಾಂಧಿ ಹಿಂದೆ ಲಾಕ್ ಡೌನ್ ವಿಫಲವಾಗಿದೆ ಎಂದು ಆರೋಪಿಸಿದ್ದರು. ಲಾಕ್ಡೌನ್ ಬಳಿಕವೂ ಕೊರೊನಾ ಸೋಂಕು ಗಣನೀಯವಾಗಿ ಬೆಳೆಯುತ್ತಿರುವ ಎಂದು ಗ್ರಾಫ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದರು.
This lock down proves that:
“The only thing more dangerous than ignorance is arrogance.”
Albert Einstein pic.twitter.com/XkykIxsYKI— Rahul Gandhi (@RahulGandhi) June 15, 2020
Covid19 mortality rate:
Gujarat: 6.25%
Maharashtra: 3.73%
Rajasthan: 2.32%
Punjab: 2.17%
Puducherry: 1.98%
Jharkhand: 0.5%
Chhattisgarh: 0.35%Gujarat Model exposed.https://t.co/ObbYi7oOoD
— Rahul Gandhi (@RahulGandhi) June 16, 2020
”Insanity is doing the same thing over and over again and expecting different results.” – Anonymous pic.twitter.com/tdkS3dK8qm
— Rahul Gandhi (@RahulGandhi) June 13, 2020