
ಅಸ್ಸಾಂನ ಧಿಂಗ ಗ್ರಾಮದಲ್ಲಿರುವ 20ರ ಹರೆಯದ ಹಿಮಾ ದಾಸ್, ಅತ್ಯುನ್ನತ ಕ್ರೀಡಾ ಗೌರವ ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ಅಸ್ಸಾಂ ಸರ್ಕಾರ ಹೇಮಾ ಹೆಸರು ಶಿಫಾರಸು ಮಾಡಿದೆ .
ಇತ್ತೀಚೆಗಷ್ಟೆ ಭಾರತ ಹಾಕಿ ತಂಡದ ನಾಯಕಿ ರಾಣಿ ರಾಂಪಲ್ 2020ರ ‘ಖೇಲ್ ರತ್ನ ಪ್ರಶಸ್ತಿ‘ಗೆ ನಾಮ ನಿರ್ದೇಶನಗೊಂಡಿದ್ದರು. ಇವರ ಜೊತೆಗೆ ವಂದನ ಕಟಾರಿಯಾ, ಮೊನಿಕಾ ಮತ್ತು ಪರುಷ ಹಾಕಿ ತಂಡದ ಆಟಗಾರ ಹರ್ಮನ್ಪ್ರೀತ್ ಸಿಂಗ್ ‘ಅರ್ಜುನ ಪ್ರಶಸ್ತಿ‘ಗೆ ಆಯ್ಕೆಯಾಗಿದ್ದರು.
20ರ ಹರೆಯದ ಹಿಮಾ ದಾಸ್, ಖೇಲ್ ರತ್ನಕ್ಕೆ ಶಿಫಾರಸಾದ ಅತೀ ಕಿರಿಯ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದಾರೆ. ಅಸ್ಸಾಂ ನ ಕ್ರೀಡಾ ಕಾರ್ಯದರ್ಶಿ ದುಲಾಲ್ ಚಂದ್ರ ದಾಸ್ ಅವರು ಜೂನ್ 5ರಂದು ಕ್ರೀಡಾ ಸಚಿವಾಲಯಕ್ಕೆ ಶಿಫಾರಸು ಪತ್ರ ರವಾನಿಸಿದ್ದಾರೆ.2018ರಲ್ಲಿ ಫಿನ್ಲೆಂಡ್ ನಲ್ಲಿ ನಡೆದ 20 ವರ್ಷದೊಳಗಿನವರ ವಿಶ್ವ ಚಾಂಪಿಯನ್ ಷಿಪ್ನಲ್ಲಿ ಸ್ವರ್ಣ ಪದಕ ಜಯಿಸಿದ ಭಾರತದ ಮೊದಲ ಟ್ರ್ಯಾಕ್ ಅಥ್ಲೀಟ್ ಹಾಗು ಅದೇ ವರ್ಷ ಅರ್ಜುನ ಗೌರವಕ್ಕೆ ಪಾತ್ರರಾಗಿದ್ದರು.