
ನ್ಯೂಯಾರ್ಕ್: ಜೂನ್ 14 ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ(ಯುಎಸ್)ದ ಧ್ವಜ ದಿನ ಹಾಗೂ ದೇಶದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹುಟ್ಟಿದ ದಿನ ಕೂಡ. ಅವರು 74 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಆದರೆ, ಅಮೆರಿಕನ್ನರು ಟ್ವಿಟರ್‌ನಲ್ಲಿ ಟ್ರಂಪ್ ಅವರಿಗೆ ಅಭಿನಂದಿಸುವ ಬದಲು ಅಮೆರಿಕಾದ 44ನೇ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ನೆನಪಿಸಿಕೊಂಡಿದ್ದಾರೆ. ಅವರನ್ನು ಹೊಗಳಿದ್ದಾರೆ. ‘ಬರಾಕ್ ಒಬಾಮಾ ಡೇ,’ ‘ಒಬಾಮಾ ಅಪ್ರಿಸಿಯೇಶನ್ ಡೇ’ ಮುಂತಾದ ಟ್ಯಾಗ್ ಲೈನ್ ಗಳನ್ನು ಹ್ಯಾಷ್ ಟ್ಯಾಗ್ ನೊಂದಿಗೆ ಟ್ವಿಟರ್‌ನಲ್ಲಿ ಹಂಚಿಕೊಂಡು ಒಬಾಮಾ ಅವರ ಫೋಟೋವನ್ನು ಅಪ್‌ಲೋಡ್ ಮಾಡಿದ್ದಾರೆ. ಒಬಾಮಾ ಅವರನ್ನು ಟ್ರಂಪ್ ಅವರ ಜತೆ ಹೋಲಿಸಿದ್ದಾರೆ.
ಒಬಾಮಾ ಅವರಲ್ಲಿ ನಾಯಕನಾಗುವ ಎಲ್ಲ ಗುಣಗಳೂ ಇವೆ ಎಂಬುದು ಅಲ್ಲಿನ ಜನರ ನಂಬಿಕೆ. ‘ಒಬಾಮಾ ಅಮೆರಿಕಾದ ಅತಿ ಜನಪ್ರಿಯ ಅಧ್ಯಕ್ಷ. ಅವರು ಕಪ್ಪು ಗುಲಾಮಿ ಜನಾಂಗದ ಕುಟುಂಬದಿಂದ ಬಂದವರು. ಕಪ್ಪು ಜನರು ಅನುಭವಿಸುವ ಸಂಕಷ್ಟಗಳೇನು ಎಂಬುದು ಅವರಿಗೆ ಗೊತ್ತಿದೆ. ಇವತ್ತಿಗೆ ಯಾವ ಅನುಕಂಪ ಅವರಿಗೆ ಬೇಕು ಎಂಬ ಮಾಹಿತಿ ಅವರಿಗಿದೆ’ ಎಂದು ಟ್ವಿಟರ್ ಬಳಕೆದಾರರು ಬರೆದುಕೊಂಡಿದ್ದಾರೆ.
Wish the President a Happy Birthday?
Nah, #AllBirthdaysMatter brotendo
Have an Obama. pic.twitter.com/dhgtZnyQ2D
— Tuca (@tucakeane) June 14, 2020
It’s Trump birthday today but we gone celebrate our birthday today cause #AllBirthdaysMatter !! 😂🥳 pic.twitter.com/spvN5MHLs8
— W.W.Y.D. (@YouKnowTheVib) June 14, 2020