
ಬೆಂಗಳೂರು: ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜಪೂತ್ ದುರಂತ ಸಾವಿಗೆ ಇಡೀ ದೇಶದ ಚಿತ್ರರಂಗ ಕ್ಕೆ ಭರಿಸಲಾಗದ ನಷ್ಟವಾಗಿದೆ . ಸುಶಾಂತ್ ಆತ್ಮಹತ್ಯೆ ಮಾಡುವ ನಿರ್ಧಾರ ಮಾಡಬಾರದಿತ್ತು ಎಂದು ಮರುಕ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಇದೀಗ ನಿರೂಪಕಿ ಅನುಶ್ರೀ ಸಹ ಭಾವನಾತ್ಮ ಸಾಲುಗಳ ಮೂಲಕ ನಟನಿಗೆ ವಿದಾಯ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸುಶಾಂತ್ ಸಿಂಗ್ ರಜಪೂತ್ ರವರ ಫೋಟೋ ಹಾಕಿ ಮನಮುಟ್ಟುವ ಸಾಲುಗಳನ್ನು ಬರೆದಿರುವ ಅನುಶ್ರೀ, “ಯಾವ ನಗುವಿನ ಹಿಂದೆ ಯಾವ ನೋವಿರತ್ತೋ??ಮರೆಯಾಲಾರದ………ಮರೆಸಲಾರದ…….ಕ್ಷಮಿಸಲಾಗದ ವರ್ಷ……ಒಂಟಿತನ ಹಾಗು ಮಾನಸಿಕ ಖಿನ್ನತೆ ಕರೋನ ವೈರಸ್ ಗಿಂತ ಅಪಾಯಕಾರಿ…ಎಷ್ಟು ಮಾನಸಿಕ ನೋವು ಈ ಅದ್ಭುತ ನಟನನ್ನು ಕಾಡಿತ್ತೋ ಏನೋ …ನುಂಗಲಾರದೆ …ಹೇಳಲಾರದೆ ಅದೆಷ್ಟು ನೋವು ಈ ಜೀವ ಅನುಭವಿಸಿತ್ತೋ ಏನೋ …ಒಂದು ಸಣ್ಣ ವಿನಂತಿ ಈ ಮೂಲಕ ಹೀಯಾಳಿಸೋದು , ಕೆಟ್ಟದಾಗಿ ಹೇಳೋದು,ಕಾಮೆಂಟ್ ಮಾಡೋದು ….ಅಯ್ಯೋ ಇವನ /ಇವಳ ಹಾಗೆ ಹೀಗೆ ಎಂದು ನಿಂದಿಸುವುದು …ಮುಖ್ಯವಾಗಿ ಹೆಣ್ಣುಮಕ್ಕಳಿಗೆ ಹೇಳುವ ಅಶ್ಲೀಲ ಹೇಳಿಕೆಗಳು…ಹೇಳುವಾಗ ಅವರ ಹಿಂದೆ ಮಾತಾಡುವಾಗ ಮತ್ತು ಕಾಮೆಂಟ್ ಮಾಡುವಾಗ ಒಮ್ಮೆ ಯೋಚಿಸಿ… What they go through..”ಕೆಲವರನ್ನು ಇಲ್ಲವಾಗಿಬಿಡಿಸುತ್ತೆ ನಿಮ್ಮ ಮಾತುಗಳು ” ಒಬ್ಬರ ಕಲೆ ಮತ್ತು ಪ್ರತಿಭೆಯಿಂದ ಅವನ ಬೆಲೆ ಅಥವಾ ಗೌರವ ಇರುತ್ತೇ ಹೊರತು ಅವನ success ಅಥವ failure ನಿಂದಲ್ಲ ….ಕೊನೆಯದಾಗಿ ಎಲ್ಲಾ ಮನಸ್ತಾಪಗಳನ್ನ ದೂರ ಇಡಿ…ಇವತ್ತು ನಿಮ್ಮ ಸ್ನೇಹಿತರಿಗೋ ಅಥವಾ ಸಂಭಂಧಿಕರಿಗೋ..ಮನೆಯವರಿಗೋ ಕರೆ ಮಾಡಿ ಮಾತಾಡಬೇಕೆಂದೆನಿಸಿದರೆ ಮಾಡಿ..ಇನ್ನೊಬ್ಬರ ಮಾತಿಗೆ ಕಿವಿಯಾಗಿ…ಯಾಕಂದ್ರೆ ನಾಳೆ ಅವರಿಲ್ಲವಾಗಬಹುದು”ಎಂದು ಭಾವನಾತ್ಮಕವಾಗಿ ಬರೆದಿದ್ದರೆ . ಜೂನ್ 14ರಂದು ಸುಶಾಂತ್ ನಿಧನರಾಗಿದ್ದು, ಸುಶಾಂತ್ ಸಾವಿಗೆ ಇದುವರೆಗೂ ನಿಖರ ಕಾರಣ ತಿಳಿದು ಬಂದಿಲ್ಲ ಮತ್ತು ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಹ ಲಭ್ಯವಾಗಿಲ್ಲ.