
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅತ್ತಿಗೆ ಸುಧಾ ದೇವಿ ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಬಿಹಾರದಲ್ಲಿ ನಿಧನರಾಗಿದ್ದಾರೆ. ಸುಶಾಂತ್ ನ ಸಾವಿನ ಸುದ್ದಿ ಕೇಳಿ ಸುಧಾ ದೇವಿ ಆಘಾತಕ್ಕೆ ಒಳಗಾಗಿದ್ದರು ಎಂದು ವರದಿಯಾಗಿದೆ.ಮುಂಬೈನಲ್ಲಿ ಸುಶಾಂತ್ ಅಂತ್ಯಕ್ರಿಯೆ ನಡೆಯುತ್ತಿದ್ರೆ, ಇತ್ತ ಬಿಹಾರಾ ಪೂರ್ಣಿಯಾದಲ್ಲಿ ಅತ್ತಿಗೆ ಸುಧಾ ನಿಧನರಾಗಿದ್ದಾರೆ. ಇವರ ಸಾವಿನ ಸುದ್ದಿ ಕುಟುಂಬಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಭಾನುವಾರ ಫ್ಯಾನಿಗೆ ನೇಣು ಹಾಕಿಕೊಂಡು ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದರು. ಸೋಮವಾರ ಸಂಜೆ ಮುಂಬೈನ ವಿಲೆ ಪಾರ್ಲೆ ಸೇವಾ ಸಮಾಜದಲ್ಲಿ ಸುಶಾಂತ್ ಅಂತ್ಯಕ್ರಿಯೆ ನಡೆದಿತ್ತು.