
ಮುಂಬೈ : ಐಪಿಎಲ್ ಟೂರ್ನಿ ಆರಂಭದ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಬಿಸಿಸಿಐ ಸಿಹಿಸುದ್ದಿಯೊಂದನ್ನು ನೀಡಿದ್ದು, ಇದೇ ವರ್ಷದಲ್ಲಿ ಐಪಿಎಲ್ ಟೂರ್ನಿ ಆಯೋಜಿಸಲು ಬಿಸಿಸಿಐ ಭರ್ಜರಿ ಪ್ಲ್ಯಾನ್ ಮಾಡಿದೆ.
ಹೌದು, ಬಿಸಿಸಿಐ ಸೆಪ್ಟೆಂಬರ್ 26 ರಿಂದ ನವೆಂಬರ್ 8 ರವರೆಗೆ ಐಪಿಎಲ್ ನಡೆಸಲು ಚಿಂತನೆ ನಡೆಸಿದ್ದು, ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಐಪಿಎಲ್ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಂತಾಗಿದೆ.
ಸೆಪ್ಟೆಂಬರ್ 26 ರಿಂದ ನವೆಂಬರ್ 8 ರವರೆಗೆ ಒಟ್ಟಾರೆ 60 ಪಂದ್ಯಗಳನ್ನು ಮುಗಿಸಲು ಬಿಸಿಸಿಐ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಈ ಬಾರಿ ಕೇವಲ 5 ಕ್ರೀಡಾಂಗಣಗಳಲ್ಲಿ ಆಯ್ಕೆ ಮಾಡಿಕೊಂಡು ಇಡೀ ಟೂರ್ನಿಯನ್ನು ನಡೆಸಲಿದೆ.