
ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ನೌಗಮ್ ಸೆಕ್ಟರ್ನಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನವು ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಬುಧವಾರ ತಿಳಿಸಿದೆ.
ಜೂನ್ 16 ರಂದು ಸಂಜೆ ತಡವಾಗಿ ಪಾಕಿಸ್ತಾನ ಸೇನೆಯು ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಗೆ ಚಾಲನೆ ನೀಡಿತು. ಇದಕ್ಕೆ ಭಾರತೀಯ ಸೇನೆಯು ಸೂಕ್ತ ಪ್ರತಿಕ್ರಿಯೆ ನೀಡಿತು. ಯಾವುದೇ ಗಾಯಗಳು ಅಥವಾ ಪ್ರಾಣಹಾನಿ ಬಗ್ಗೆ ವರದಿಗಳು ಬಂದಿಲ್ಲ. ಇದು ಪಾಕಿಸ್ತಾನದ ಎರಡನೇ ಕದನ ವಿರಾಮ ಉಲ್ಲಂಘನೆಯಾಗಿದೆ ಎಂದು ಸುದ್ದಿ ಸಂಸ್ಥೆ ಐಎಎನ್ಎಸ್ ತಿಳಿಸಿದೆ.ಕೆಲವು ದಿನಗಳಿಂದ ಕಾಶ್ಮೀರದ ಉರಿ ಮತ್ತು ತಂಗಧರ್ ವಲಯಗಳಲ್ಲಿನ ನಿಯಂತ್ರಣ ಮತ್ತು ಜಮ್ಮುವಿನ ರಾಜೌರಿ ಮತ್ತು ಪೂಂಚ್ನ ಪಿರ್ ಪಂಜಾಲ್ನ ದಕ್ಷಿಣಕ್ಕೆ ಪಾಕಿಸ್ತಾನವು ಹಲವಾರು ಕದನ ವಿರಾಮ ಉಲ್ಲಂಘನೆ ಮಾಡಿದೆ.