ರಾಷ್ಟ್ರೀಯ
Trending

ಭಾರತ-ಚೀನಾ ಹಿಂಸಾತ್ಮಕ ಗಡಿ ಘರ್ಷಣೆ ಬಗ್ಗೆ ಅಮೆರಿಕ ಪ್ರತಿಕ್ರಿಯೆ!

ವಾಷಿಂಗ್ಟನ್:ಭಾರತ-ಚೀನಾ ಸೈನಿಕರ ನಡುವೆ   ಲಡಾಖ್ ಗಡಿಯಲ್ಲಿ  ನಡೆದ ಘರ್ಷಣೆಯನ್ನು ಅಮೆರಿಕ ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಹೇಳಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ, ಶಾಂತಿ ಮರುಸ್ಥಾಪನೆಗೆ ತನ್ನ ಕೈಲಾದ ಸಹಾಯವನ್ನು ಮಾಡಲು ಅಮೆರಿಕ ಸಿದ್ಧವಿದೆ ಎಂದು ಹೇಳಿದ್ದಾರೆ.

ಗಡಿ ಘರ್ಷಣೆಯಲ್ಲಿ ಭಾರತ-ಚೀನಾ ಸೈನಿಕರು ಮೃತಪಟ್ಟಿರುವ ಘಟನೆ ನೋವಿನ ಸಂಗತಿ ಎಂದಿರುವ ಅಮೆರಿಕ, ಪರಿಸ್ಥಿತಿ ಹದಗೆಡದಂತೆ ನೋಡಿಕೊಳ್ಳುವುದು ಉಭಯ ದೇಶಗಳ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟಿದೆ.

ಭಾರತ-ಚೀನಾ ಗಡಿಯಲ್ಲಿ  20 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಭಾರತ ಘೋಷಿಸಿರುವುದನ್ನು ಗಮನಿಸಿದ್ದೇವೆ. ಮೃತರ ಕುಟುಂಬಕ್ಕೆ ನಾವು ಸಂತಾಪ ಸೂಚಿಸುತ್ತಿದ್ದೇವೆ ಎಂದು ಅಮೆರಿಕ ರಕ್ಷಣಾ ಸಚಿವಾಲಯದ ವಕ್ತಾರರು ಎಎನ್ಐಗೆ ತಿಳಿಸಿದ್ದಾರೆ.ಜೂನ್ 2ರಂದು ನಡೆದ ಟ್ರಂಪ್-ಮೋದಿ ಮಾತುಕತೆಯಲ್ಲಿ ಇಬ್ಬರೂ ಚೀನಾ ಗಡಿ ವಿವಾದದ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ಅಮೆರಿಕ ಹೇಳಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!