
ಪಾಟ್ನಾ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಸೆಲೆಬ್ರಿಟಿಗಳ ವಿರುದ್ಧ ವಕೀಲ ಸುಧಿರ್ ಕುಮಾರ್ ಓಜಾ ಮುಜಾಫರ್ಪುರ್ ನ್ಯಾಯಾಲಯದಲ್ಲಿ ದೂರು ದಾಖಲಸಿದ್ದಾರೆ. ಏಳು ಸಿನಿಮಾಗಳಿಂದ ಸುಶಾಂತ್ ಅವರನ್ನು ಕೈ ಬಿಡಲಾಗಿತ್ತು. ಜೊತೆಗೆ ಕೆಲ ಸಿನಿಮಾಗಳು ಬಿಡುಗಡೆ ಆಗಿಲ್ಲ. ಈ ಎಲ್ಲ ಘಟನೆಗಳು ಸುಶಾಂತ್ ಅವರಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರಿಂದ ನಟ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವಕೀಲ ಓಜಾ ಆರೋಪಿಸಿದ್ದಾರೆ.
In the complaint, I have alleged that Sushant Singh Rajput was removed from around seven films and some of his films were not released. Such a situation was created which forced him to take the extreme step: Advocate Sudhir Kumar Ojha
— ANI (@ANI) June 17, 2020
ಬಾಲಿವುಡ್ ಸಿನಿಮಾ ನಿರ್ದೇಶಕರಾದ ಕರಣ್ ಜೋಹರ್, ಸಂಜಯ್ ಲೀಲಾ ಬನ್ಸಾಲಿ, ನಿರ್ಮಾಪಕಿ ಏಕ್ತಾ ಕಪೂರ್ ಮತ್ತು ನಟ ಸಲ್ಮಾನ್ ಖಾನ್ ಸೇರಿದಂತೆ ಎಂಟು ಜನರ ವಿರುದ್ಧ ಐಪಿಸಿ ಸೆಕ್ಸನ್ 306, 109, 504 ಮತ್ತು 506 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್ನಲ್ಲಿ ತಾರತಮ್ಯದ ಜನರು ಪ್ರಶ್ನೆ ಎತ್ತುತ್ತಿದ್ದಾರೆ. ಸುಶಾಂತ್ ನನ್ನು ಮಾನಸಿಕವಾಗು ಕುಗ್ಗಿಸಿ ಆತ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಲಾಯ್ತು. ಇದು ಸೂಸೈಡ್ ಅಲ್ಲ, ಪೂರ್ವ ನಿಯೋಜಿತ ಕೊಲೆ ಎಂದು ನಟ ಕಂಗನಾ ರಣಾವತ್ ಆರೋಪಿಸಿದ್ದರು.