ರಾಷ್ಟ್ರೀಯ

ಕೊರೋನಾಗೆ ‘ಪತಂಜಲಿ’ ಮದ್ದು ..! ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಇಡೀ ವಿಶ್ವ ಕೊರೋನಾ ಸೋಂಕಿನಿಂದ ತತ್ತರಿಸುತ್ತಿದೆ . ಔಷಧ ಕಂಡುಹಿಡಿಯಲು ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ . ಇದೀಗ  ಪತಂಜಲಿ ಸಂಸ್ಥೆ ಕೊರೋನಾಗೆ  ಮದ್ದು ಕಂಡುಹಿಡಿದಿದೆ. ಸ್ವತಃ ಯೋಗಗುರು ಬಾಬಾ ರಾಮ್ ದೇವ್ ಈ ಬಗ್ಗೆ ತಿಳಿಸಿದ್ದಾರೆ.

ಹರಿದ್ವಾರದಲ್ಲಿ ಔಷಧ ಬಿಡುಗಡೆ ಮಾಡಿ ಮಾತನಾಡಿದ ಅವರು, ‘’ ಕೋವಿಡ್ 19ಗೆ ಪತಂಜಲಿ ಸಂಸ್ಥೆ ಆಯುರ್ವೇದ ಔಷಧಿ ಕಂಡು ಹಿಡಿದಿದೆ . ಕೊರೊನಿಲ್ ಮತ್ತು ಸಸ್ವರಿ ಹೆಸರಿನ ಎರಡು ಔಷಧವನ್ನು ಸಂಸ್ಥೆ ಪರಿಚಯಿಸುತ್ತಿದ್ದು, ಈ ಔಷಧ ಸೇವಿಸಿದರೆ 7 ದಿನಗಳಲ್ಲಿ ಕೊರೋನಾದಿಂದ ಸಂಪೂರ್ಣ ಗುಣಮುಖರಾಗಬಹುದು’’ ಎಂದು ತಿಳಿಸಿದ್ದಾರೆ .

ಪತಂಜಲಿ ಸಂಶೋಧನಾ ಕೇಂದ್ರ ಮತ್ತು ಜೈಪುರದಲ್ಲಿರುವ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ(ನಿಮ್ಸ್‌) ಜಂಟಿಯಾಗಿ ಕ್ಲಿನಿಕಲ್‌ ಟ್ರಯಲ್‌ ಮಾಡಿದೆ. ರೋಗಿಗಳು  3 ರಿಂದ 7 ದಿನದೊಳಗೆ ಶೇ.100ರಷ್ಟು ಗುಣಮುಖರಾಗುತ್ತಾರೆ. ದೆಹಲಿ, ಅಹಮದಾಬಾದ್‌ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಪ್ರಯೋಗ ಮಾಡಿದ್ದೇವೆ. 280 ರೋಗಿಗಳಿಗೆ ನೀಡಿದ್ದು, ಔಷಧಿ ಪಡೆದ ಎಲ್ಲ ರೋಗಿಗಳು ಗುಣಮುಖರಾಗಿದ್ದಾರೆ ಎಂದು ಹೇಳಿದ್ದಾರೆ.

ಪತಂಜಲಿ ಸಂಸ್ಥೆಯ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ  ಮಾತನಾಡಿ, “ ಕೊರೊನಾ ಕಿಟ್‌ ಬೆಲೆ 545 ರೂ. ಇದ್ದು, 30 ದಿನಗಳ ಕಾಲ ಬಳಸಬಹುದು. ಸದ್ಯಕ್ಕೆ ಈ ಔಷಧಿ ಎಲ್ಲಿಯೂ ಸಿಗುವುದಿಲ್ಲ. ಒಂದು ವಾರದಲ್ಲಿ ಪತಂಜಲಿ ಅಂಗಡಿಗಳಲ್ಲಿ ಲಭ್ಯವಾಗಲಿದೆ. ಕೊರೊನಾ ಕಿಟ್‌ ವಿತರಣೆಗೆ ಅಪ್ಲಿಕೇಶನ್‌ ಬಿಡುಗಡೆ ಮಾಡಲಾಗುವುದು’’ಎಂದು ತಿಳಿಸಿದ್ದಾರೆ .

 

Related Articles

Leave a Reply

Your email address will not be published. Required fields are marked *

Back to top button
error: Content is protected !!