
ದೇಶದಲ್ಲಿ ಸ್ವಾವಲಂಬಿ ಬದುಕನ್ನು ಕಟ್ಟಿ ತನ್ನ ಸದಸ್ಯರ ಹಿತಕ್ಕಾಗಿ ಮತ್ತು ಸಹಕಾರಿ ಮನೋಭಾವದಿಂದ ದೇಶದ ಆರ್ಥಿಕವಾಗಿ ಮುನ್ನಡೆಯಲು ಬಹಳಷ್ಟು ಕೊಡುಗೆ ನೀಡುವಂತಹ ಸಹಕಾರಿ ಬ್ಯಾಂಕ್‍ಗಳು ಇನ್ನು ಆರ್.ಬಿ.ಐ ವ್ಯಾಪ್ತಿಗೆ ಬರಲಿದೆ ಎಂದು ಈಗಾಗಲೇ ಕೇಂದ್ರ ಸರಕಾರದ ಸಂಪುಟ ಸಭೆಯಲ್ಲಿ ಅನುಮೋದನೆಯನ್ನೂ ಪಡೆಯಲಾಗಿದ್ದು, ಈ ನಿಲುವಿನಿಂದಾಗಿ ದೇಶದ ಸಹಕಾರಿ ಕ್ಷೇತ್ರಕ್ಕೆ ಇನ್ನಷ್ಟು ಬಲ ಮತ್ತು ಒತ್ತು ನೀಡುತ್ತಿದ್ದು ಸಹಕಾರಿ ಕ್ಷೇತ್ರಕ್ಕೆ ಈ ಬಲದಿಂದಾಗಿ 100 ವರ್ಷಗಳಷ್ಟು ಹಳೆಯ ಇತಿಹಾಸಕ್ಕೆ ಇನ್ನಷ್ಟು ಪುಷ್ಟಿ ನೀಡಿದಂತಾಗುತ್ತದೆ. ಸಹಕಾರಿಗಳು ಈ ಒಂದು ಬಲದಿಂದಾಗಿ ತನ್ನ ಗ್ರಾಹಕರನ್ನು ಇನ್ನಷ್ಟು ಆಕರ್ಷಿಸಿ ಬಹಳಷ್ಟು ಠೇವಣಿ ಜೊತೆಗೆ ಸಾಲ ನೀಡಿ ತಮ್ಮ ಸದಸ್ಯರ ಬದಲಾವಣೆಯ ಈ ಕಾಲಘಟ್ಟದಲ್ಲಿ ಶಕ್ತಿ ಸಾಮರ್ಥ್ಯದ ಜೊತೆಗೆ ಬೆಳವಣಿಗೆ ಹೊಂದಿ ದೇಶದ ಆರ್ಥಿಕತೆಗೆ ಸಹಕಾರಿಯ ಕೊಡುಗೆ ಬಹಳಷ್ಟು ಎನ್ನುವಂತೆ ಅಭಿವೃದ್ಧಿ ಆಗುವುದಕ್ಕೆ ಸಂಶಯವಿಲ್ಲ. ಈ ಎಲ್ಲದರೊಳಗೆ ಸಹಕಾರಿಯ ಪತಾಕೆ ಇನ್ನಷ್ಟು ಬೆಳೆದು ದೂರದೃಷ್ಟಿತ್ವ, ಸ್ವಾವಲಂಬಿಯಾಗಿ ಆರ್.ಬಿ.ಐ ನ ಮಾರ್ಗದರ್ಶನದೊಂದಿಗೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ ಎನ್ನುವುದು ನನ್ನ ಆಶಯ. ಕೇಂದ್ರ ಸರ್ಕಾರದ ಈ ದಿಟ್ಟ ನಿರ್ಧಾರದಿಂದ ದೇಶದ ಅಧಿಕಾರ ಕ್ಷೇತ್ರದಲ್ಲಿ ಸಹಕಾರಿಗಳ ಪಾತ್ರ ಹೆಚ್ಚಲಿದೆ.
ಮಂಜುನಾಥ ಎಸ್.ಕೆ,
ನಿರ್ದೇಶಕರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಮತ್ತು ಅಧ್ಯಕ್ಷರು, ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ನಿ., ಉಡುಪಿ.