
ನವದೆಹಲಿ : ಆದಾಯ ತೆರಿಗೆ ಪಾವತಿದಾರರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, 2019-20 ನೇ ಹಣಕಾಸು ವರ್ಷದ ರಿಟರ್ನ್ಸ್ ಸಲ್ಲಿಕೆ ಗಡುವನ್ನು ನವೆಂಬರ್ 30 ರವರೆಗೆ ವಿಸ್ತರಿಸಲಾಗಿದೆ.
ದೇಶದಲ್ಲಿ ಕೊರೊನಾ ವೈರಸ್ ನಿಂದ ಉದ್ಭವಿಸಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಆದಾಯ ತೆರಿಗೆ ವಿವರ ಸಲ್ಲಿಕೆ ಗಡುವನ್ನು ನವೆಂಬರ್ 30 ರವರೆಗೆ ವಿಸ್ತರಿಸಲಾಗಿದೆ. 2019-20 ನೇ ಸಾಳಿಗೆ ತೆರಿಗೆ ಉಳಿತಾಯಕ್ಕೆ ಅನುಕೂಲವಾಗುವ ಹೂಡಿಕೆ, ಪಾವತಿಗಳ ಅಂತಿಮ ಗಡುವನ್ನು ಜುಲೈ 31 ರವರೆಗೆ ಇಲಾಖೆ ವಿಸ್ತರಿಸಿತ್ತು.
ಇದರಿಂದ ತೆರಿಗೆದಾರರು ತಮ್ಮ ಹಣವನ್ನು ಯೋಜನೆಗಳಿಗೆ ಹಾಕಿ ತೆರಿಗೆ ಹೊರೆ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗಲಿದೆ ಎನ್ನಲಾಗಿದೆ. ಸದ್ಯದ ಪರಿಸ್ಥಿತಿಯನ್ನು ಮನಗಂಡ ಐಟಿ ಇಲಾಖೆ ನವೆಂಬರ್ 30ರವರೆಗೆ ತೆರಿಗೆ ರಿಟರ್ನ್ ಸಲ್ಲಿಕೆ ಅವಧಿ ವಿಸ್ತರಣೆ ಮಾಡಿದೆ.