ಅಂತಾರಾಷ್ಟ್ರೀಯ
ಶ್ರೀಲಂಕಾ ಬ್ಯಾಟ್ಸ್ ಮೆನ್ `ಕುಸಲ್ ಮೆಂಡಿಸ್’ ಬಂಧನ

ಕೊಲಂಬೊ : ಪಾದಚರಿಯೊಬ್ಬರ ಮೇಲೆ ವಾಹನ ಹಾಯಿಸಿ ಅವರ ಸಾವಿಗೆ ಕಾರಣವಾಗಿರುವ ಆರೋಪದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಆಟಗಾರ ಕುಸಲ್ ಮೆಂಡಿಸ್ ಅವರನ್ನು ಬಂಧಿಸಲಾಗಿದೆ. ಕೊಲಂಬೊ ಉಪನಗರ ಪನದುರಾದಲ್ಲಿ ಮೆಂಡಿಸ್ ಅವರ ಕಾರು ಪಾದಚಾರಿಯೊಬ್ಬರ ಮೇಲೆ ಹರಿದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿದ್ದು, ಇಂದು ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸ ಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಅಗಿರುವ ಮೆಂಡೀಸ್ ಅವರು 44 ಟೆಸ್ಟ್ ಮತ್ತು 76 ಏಕದಿನ ಪಂದ್ಯಗಳಲ್ಲಿ ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿದ್ದಾರೆ.