
ಕೋಟ ಒಂಬತ್ತು ಜನ ಸ್ಥಳೀಯರಿಗೆ ಕರೋನಾ ಸೋಂಕು ದೃಢಪಟ್ಟಿದೆ ಎಂದು ತಿಳಿದು ಬಂದಿದೆ. ಐದು ದಿನಗಳ ಹಿಂದೆ ಹೋಟೆಲ್ ನಲ್ಲಿ ಒಬ್ಬರಿಗೆ ಕರೋನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರ ಮನೆ ಮತ್ತು ಹೋಟೆಲ್ ಸೀಲ್ ಡೌನ್ ಮಾಡಲಾಗಿತ್ತು ಅವರನ್ನು covid-19 ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಅವರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರನ ಕ್ಯಾರೆಟ್ನಲ್ಲಿ ಇಟ್ಟು ಕರೋನಾ ಪರೀಕ್ಷೆ ಮಾಡಲಾಗಿತ್ತು. ಈಗ ಅವರ ಸಂಪರ್ಕದಲ್ಲಿದ್ದ ದಿನಸಿ ಅಂಗಡಿ ಮಾಲೀಕರನ್ನು ಸೇರಿ ಒಂಬತ್ತು ಜನರಿಗೆ ಕರೋನಾ ಪಾಸಿಟಿವ್ ದೃಡಪಟ್ಟಿದೆ ಎಂದು ತಿಳಿದು ಬಂದಿದೆ.
ಈ ವರದಿಯಿಂದ ಹೋಟೆಲ್ ಗ್ರಾಹಕರು ಮತ್ತು ದಿನಸಿ ಅಂಗಡಿಯಿಂದ ಸಾಮಾನು ತೆಗೆದುಕೊಂಡು ಹೋದ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.