
ಭವಿಷ್ಯದಲ್ಲಿ ನಾಯಕನಾಗುವ ಕನಸು ಕಂಡಿದ್ದ, ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟ ಸುಶೀಲ್ ಗೌಡ ತಮ್ಮ ಹುಟ್ಟೂರಾದ ಮಂಡ್ಯದಲ್ಲಿ ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ದುನಿಯಾ ವಿಜಯ್ ಪ್ರಮುಖ ಪಾತ್ರದಲ್ಲಿರುವ ’ಸಲಗ’ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರವನ್ನು ಸುಶೀಲ್ ಗೌಡ ಮಾಡಿದ್ದಾರೆ. ನಟನೆಯ ಜೊತೆಗೆ ಜಿಮ್ ಕೋಚ್ ಸಹ ಆಗಿದ್ದ ಸುಶೀಲ್ ಮೂಲತಃ ಮಂಡ್ಯದವರಾಗಿದ್ದಾರೆ. ಸುಶೀಲ್ ನಿನ್ನೆ ಆತ್ಮಹತ್ಯೆಗೆ ಶರಣಾಗಿರುವ ವಿಷಯ ತಿಳಿದ ಕೂಡಲೇ ನಟ ದುನಿಯಾ ವಿಜಯ್ ಅವರು ತಮ್ಮ ಫೇಸ್‌ಬುಕ್‌ನಲ್ಲಿ ನೋವಿನಿಂದ ಬರೆದುಕೊಂಡಿದ್ದಾರೆ.
ಮುಂದೆ ಬೆಳೆಯಬೇಕಾಗಿರುವ ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವು ಎಲ್ಲದಕ್ಕೂ ಪರಿಹಾರವಲ್ಲ. ಕೊರೊನಾದಿಂದಾಗಿ ಜನರು ಬದುಕಿನ ಬಗ್ಗೆ ಭರವಸೆ ಕಳೆದುಕೊಳ್ಳುತ್ತಿದ್ದಾರೆ, ಇದು ಸಲ್ಲದು. ಆತ್ಮಹತ್ಯೆ ಖಂಡಿತಾ ತಪ್ಪು. ಅವರ ಆತ್ಮಕ್ಕೆ ಶಾಂತಿ ದೊರೆಯಲಿ, ಎಂದು ದುನಿಯಾ ವಿಜಯ್ ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಬರೆದುಕೊಂಡಿದ್ದಾರೆ
https://www.facebook.com/DuniyaVijayOfficial/photos/a.612678675474637/3101226399953173/?type=3