
ಕುಂದಾಪುರದ ಚಿಕನ್ ಸ್ಟಾಲ್ ರಸ್ತೆಯಲ್ಲಿ ವಾಸವಾಗಿರುವ 58 ವರ್ಷದ ಪತಿ ಮತ್ತು 50 ವರ್ಷದ ಪತ್ನಿಗೆ ಕರೋನಾ ಸೋಂಕು ಇರುವುದು ದೃಢಪಟ್ಟಿದೆ. ಅವರ ಮನೆಯನ್ನು ಆರೋಗ್ಯ ಇಲಾಖೆ ಸೀಲ್ ಡೌನ್ ಮಾಡಿದೆ.
ಈ ದಂಪತಿಗಳ ಸಂಬಂಧಿಕರೊಬ್ಬರು ಇತ್ತೀಚೆಗೆ ಬೆಂಗಳೂರಿನಿಂದ ಬಂದಿದ್ದರು. ಅವರಿಗೆ ಕರೋನಾ ಸೋಂಕು ತಗಲಿದೆ. ಈ ಕಾರಣದಿಂದಾಗಿ ದಂಪತಿಗಳ ಮನೆಯ ನಾಲ್ಕು ಜನರಿಗೆ ಹೋಮ್ ಹೋಂ ಕ್ವಾರಂಟೈನ್ ಮಾಡಿ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಬಂದ ವರದಿ ಪ್ರಕಾರ ಇಬ್ಬರಿಗೆ ನೆಗೆಟಿವ್ ಮತ್ತು ಇಬ್ಬರಿಗೆ ಪಾಸಿಟಿವ್ ಬಂದಿದೆ ಎಂದು ತಿಳಿದು ಬಂದಿದೆ. ದಂಪತಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.