ಕರಾವಳಿ
ಉಡುಪಿ ಜಿಲ್ಲೆಯಲ್ಲಿ ಭಾನುವಾರ 41 ಮಂದಿಗೆ ಕೊರೋನಾ ಪಾಸಿಟಿವ್-Udupi News

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಭಾನುವಾರ ಒಟ್ಟು 41 ಮಂದಿಗೆ ಕೊರೊನಾ ಪಾಸಿಟಿವ್ ದೃಡಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1608 ಕ್ಕೆ ಏರಿಕೆಯಾಗಿದೆ.
ಉಡುಪಿಯಲ್ಲಿ 26, ಕುಂದಾಪುರದಲ್ಲಿ 11 ಹಾಗು ಕಾರ್ಕಳದಲ್ಲಿ 4 ಪ್ರಕರಣಗಳು ದಾಖಲಾಗಿದೆ ಇದರಲ್ಲಿ ಸೌದಿ ಯಿಂದ ಮರಳಿದ ಒಬ್ಬರಿಗೆ , ಮುಂಬಯಿಯಿಂದ ಬಂದ ಇಬ್ಬರಿಗೆ ,ಅಂತರ್ ಜಿಲ್ಲೆಯಿಂದ ಬಂದ 6 ಜನರಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ ಹಾಗು ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 32 ಜನರಿಗೆ ಸೋಂಕು ದೃಢ ಗೊಂಡಿದೆ.
ಈ ವರೆಗೆ ಒಟ್ಟು 1273 ಮಂದಿ ಕೋರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು ಸದ್ಯ ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ 332 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.